ದೆಹಲಿ:

ಕೇಂದ್ರ ಸರ್ಕಾರದ ವಿರುದ್ಧ ನಡೆಸುತ್ತಿರುವ ಧರಣಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಅಥಣಿ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿಯವರನ್ನು ತಮ್ಮ ಬಳಿಯೇ ಕೂರಿಸಿಕೊಂಡಿರುವುದು ಎಲ್ಲರ ಗಮನ ಸೆಳೆದರು. ಮಾತ್ರವಲ್ಲ ಬಿಜೆಪಿಗೆ ದೆಹಲಿಯಲ್ಲೇ ತಿರುಗೇಟು ನೀಡಿದರು.

ಸವದಿ ಅವರು ಸಿದ್ದರಾಮಯ್ಯ ಪಕ್ಕದಲ್ಲೇ ಕುಳಿತಿರುವುದು ಎಲ್ಲರ ಗಮನ ಸೆಳೆಯಿತು. ಕಾಂಗ್ರೆಸ್ ನಾಯಕರ ಪ್ರತಿಭಟನೆ ಯಾರು ಎಲ್ಲಿ ಕುಳಿತರೂ ಅವರು ಕಾಂಗ್ರೆಸ್ ನಾಯಕರೇ. ಆದರೆ, ಜಗದೀಶ್ ಶೆಟ್ಟರ್ ಎಪಿಸೋಡ್ ಬಳಿಕ ಎಲ್ಲರ ದೃಷ್ಟಿ ಸವದಿ ಮೇಲಿದೆ. ಆಫ್ ಕೋರ್ಸ್ ನಿನ್ನೆ ದೆಹಲಿಯಲ್ಲೇ ಅವರು ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರುವುದಿಲ್ಲ ಅಂತ ಸ್ಪಷ್ಟವಾಗಿ ಹೇಳಿದ್ದರು. ಬಿಜೆಪಿ ನಾಯಕರು ಗಾಳ ಹಾಕುತ್ತಿರುವ ಕಾರಣಕ್ಕೆ ಸವದಿಯನ್ನು ಸಿದ್ದರಾಮಯ್ಯ ಉದ್ದೇಶಪೂರ್ವಕವಾಗಿ ತಮ್ಮ ಹತ್ತಿರದಲ್ಲೇ ಕೂರಿಸಿಕೊಂಡಿದ್ದಾರೆ ಎಂಬ ಮಾತುಗಳು ವ್ಯಕ್ತವಾದವು.