Join The Telegram | Join The WhatsApp |
ಮುಂಬಯಿ :
ದೇಶದ ಮೊದಲ ವಿದ್ಯುತ್ ಚಾಲಿತ ಡಬಲ್ ಡೆಕ್ಕರ್ ಬಸ್ ಸೇವೆ ಆರಂಭಕ್ಕೆ ವಾಣಿಜ್ಯ ನಗರಿ ಮುಂಬೈಯಲ್ಲಿ ದಿನಗಣನೆ ಶುರುವಾಗಿದೆ. ಜನವರಿ 14ರಂದು ಈ ಸೇವೆಯನ್ನು ಆರಂಭಿಸಲಾಗುತ್ತದೆ ಎಂದು ಬೃಹತ್ ಮುಂಬೈ ವಿದ್ಯುತ್ ಸರಬರಾಜು ಹಾಗೂ ಸಾರಿಗೆ ಸಂಸ್ಥೆ ತಿಳಿಸಿದೆ.
ಈ ತಿಂಗಳಿನಿಂದಲೇ ಮುಂಬೈನಲ್ಲಿ ವಿದ್ಯುತ್ ಚಾಲಿತ ಪ್ರೀಮಿಯಂ ಸಿಂಗಲ್ ಡೆಕ್ಕರ್ ಬಸ್ ಸೇವೆ ಆರಂಭವಾಗಲಿದೆ. ಪ್ರಯಾಣಿಕರು ಈ ಸೇವೆಯನ್ನು ಪಡೆದುಕೊಳ್ಳಲು ಆಪ್ ಮೂಲಕವೇ ತಮ್ಮ ಆಸನಗಳನ್ನು ಕಾಯ್ದಿರಿಸಬಹುದಾಗಿದೆ. ಇದರ ಜೊತೆಗೆ ಮುಂದಿನ ವರ್ಷದ ಜೂನ್ ತಿಂಗಳಿನಿಂದ ಮುಂಬೈ ನಗರದಲ್ಲಿ 500 ಎಲೆಕ್ಟ್ರಿಕ್ ವಾಹನಗಳ ಟ್ಯಾಕ್ಸಿ ಆರಂಭಿಸಲು ‘ಬೆಸ್ಟ್’ ಯೋಜನೆಯನ್ನು ಹೊಂದಿದೆ.
ಅಶೋಕ್ ಲೇಲ್ಯಾಂಡ್ ಈಗಾಗಲೇ ಬಸ್ ಸಿದ್ಧಪಡಿಸಿದ್ದು, ಸ್ವಿಚ್ ಮೊಬಿಲಿಟಿ ಎಂಬ ಹೆಸರಿನ ಈ ಬಸ್ ಅನ್ನು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಸಮ್ಮುಖದಲ್ಲಿ ‘ಬೆಸ್ಟ್’ ಗೆ ಹಸ್ತಾಂತರ ಮಾಡಲಾಗಿದೆ. ಆರಂಭಿಕ ಹಂತದಲ್ಲಿ ಕನಿಷ್ಠ 10 ಡಬಲ್ ಡೆಕ್ಕರ್ ಬಸ್ ಸೇವೆಯನ್ನು ನೀಡಲು ಚಿಂತನೆ ನಡೆಸಲಾಗಿದೆ.
ಸಚಿವ ನಿತಿನ್ ಗಡ್ಕರಿ ಮಾತನಾಡಿ, ದೇಶದ ಸಾರಿಗೆ ವ್ಯವಸ್ಥೆಯನ್ನು ದೀರ್ಘಾವಧಿಯ ದೃಷ್ಟಿಕೋನದಿಂದ ಬದಲಾಯಿಸುವ ಅಗತ್ಯವಿದ್ದು, ನಗರ ಸಾರಿಗೆ ವ್ಯವಸ್ಥೆಯನ್ನು ಸುಧಾರಿಸಲು ಗಮನಹರಿಸುವುದರೊಂದಿಗೆ ಕಡಿಮೆ ಸ್ಥಳಾವಕಾಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರನ್ನು ಸಾಗಿಸುವ ಸಮಗ್ರ ಸ್ವರೂಪದ ವಿದ್ಯುತ್‌ಚಾಲಿತ ವಾಹನಗಳ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಲು ಕೇಂದ್ರ ಸರ್ಕಾರವು ಕಾರ್ಯೋನ್ಮುಖವಾಗಿದೆ ಎಂದರು.
ಸ್ವಿಚ್‌ಇಐವಿ 22 ಮೂಲಕ ಮುಂಬೈ ಮಹಾನಗರದ ನಿವಾಸಿಗಳಿಗೆ ಹಳೆಯ ದಿನಗಳ ನೆನಪನ್ನು ಮತ್ತೊಮ್ಮೆ ಹೊಸ ರೂಪದಲ್ಲಿ ನೆನಪಿಸಲು ಸಜ್ಜಾಗಿರುವ ಸ್ವಿಚ್ ಮೊಬಿಲಿಟಿ ಕಂಪನಿಯು ಹೊಸ ಇವಿ ಬಸ್ ಮಾದರಿಯನ್ನು ಸಮಕಾಲಿನ ಆಕರ್ಷಕ ವಿನ್ಯಾಸ ಮತ್ತು ಹಿತಾನುಭವ ನೀಡುವ ಒಳಾಂಗಣ ಹಾಗೂ ಹೊರಾಂಗಣದ ವಿನ್ಯಾಸದೊಂದಿಗೆ ಬಸ್‌ನ್ನು ಅಭಿವೃದ್ಧಿಪಡಿಸಿದೆ.
Join The Telegram | Join The WhatsApp |