ಬೆಳಗಾವಿ : ಬೆಳಗಾವಿ ತಾಲೂಕು ಸುಳಗಾ ಗ್ರಾಮದಲ್ಲಿ ಸಂಭವಿಸಿದ ಗ್ಯಾಸ್ ಅವಘಡದಲ್ಲಿ ಗಂಭೀರ ಗಾಯಗೊಂಡಿದ್ದ ದಂಪತಿ ಕೊನೆಗೂ ಬದುಕಿ ಉಳಿಯಲಿಲ್ಲ.

ಶಂಕರ ಗಲ್ಲಿಯ ಕಲ್ಲಪ್ಪ ಯಲ್ಲಪ್ಪ ಪಾಟೀಲ (ವಯಸ್ಸು 65) ಮತ್ತು ಅವರ ಪತ್ನಿ ಸುಮನ್ ಕಲ್ಲಪ್ಪ ಪಾಟೀಲ (ವಯಸ್ಸು 61) ಎಂಬವರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಒಬ್ಬ ಮಗ, ಸೊಸೆ, ಮಗಳು, ಅಳಿಯ, ಮೊಮ್ಮಕ್ಕಳನ್ನು ಒಳಗೊಂಡ ಕುಟುಂಬವನ್ನು ಹೊಂದಿದ್ದು, ಕಳೆದ ಶನಿವಾರ ಸಂಭವಿಸಿದ ಗ್ಯಾಸ್ ಸ್ಫೋಟದಲ್ಲಿ ಈ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ನಾಲ್ಕು ದಿನದಿಂದ ಸಾವು-ಬದುಕಿನೊಂದಿಗೆ ಹೋರಾಡುತ್ತಿದ್ದರು. ಕೊನೆಗೆ ನಿನ್ನೆ ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು.

ಕಳೆದ ಶನಿವಾರ ನಸುಕಿನ ನಾಲ್ಕು ಗಂಟೆ ಸುಮಾರಿಗೆ ಸುಮನ್ ಪಾಟೇಲ ಎದ್ದು ಅಡುಗೆ ಮನೆಗೆ ಹೋಗಿ ಕರೆಂಟ್ ಸ್ವಿಚ್ ಅನ್ ಮಾಡಿದ್ದಾರೆ. ಆಗ ಸಿಲಿಂಡರ್ ಸ್ಫೋಟಗೊಂಡಿದೆ. ಇದರಿಂದ ದಂಪತಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕೊನೆಗೂ ಚಿಕಿತ್ಸೆ ಫಲಕಾರಿಯಾಗದೆ ದಂಪತಿ ಮೃತಪಟ್ಟಿದ್ದಾರೆ.