Join The Telegram | Join The WhatsApp |
ಮಂಗಳೂರು :
ಅಪ್ರಾಪ್ತ ಮಗನಿಗೆ ದ್ವಿಚಕ್ರ ವಾಹನ ಚಲಾಯಿಸಲು ಅವಕಾಶ ಮಾಡಿಕೊಡುವ ಮೂಲಕ ಅಪಘಾತಕ್ಕೆ ಕಾರಣನಾದ ಅಪ್ಪನಿಗೆ ಪುತ್ತೂರು ನ್ಯಾಯಾಲಯ 20 ಸಾವಿರ ದಂಡ ವಿಧಿಸಿದೆ.
ಕಡಬ ತಾಲೂಕಿನ ಕೊಯಿಲ ಗ್ರಾಮದ ಅಬ್ದುಲ್ ರಹಮಾನ್ 2020ರಲ್ಲಿ ತಮ್ಮ ಅಪ್ರಾಪ್ತ ಮಗನಿಗೆ ಬೈಕ್ ಚಲಾಯಿಸಲು ನೀಡಿದ್ದರು.
ಮಗ ಬೈಕ್ ಚಲಾಯಿಸುವ ವೇಳೆ ಅಪಘಾತ ಎಸಗಿದ್ದ. ಈ ಸಂಬಂಧ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿದ ಪುತ್ತೂರು ನ್ಯಾಯಾಲಯ ವಾಹನದ ಮಾಲಿಕರಾದ ಅಪ್ರಾಪ್ತನ ಅಪ್ಪನಿಗೆ 20 ಸಾವಿರ ದಂಡ ವಿಧಿಸಿದೆ.
ಮೋಟಾರು ವಾಹನ ಕಾಯ್ದೆಯ ನಿಯಮಗಳ ಪ್ರಕಾರ ಅಪ್ರಾಪ್ತ ಮಕ್ಕಳಿಗೆ ವಾಹನ ಚಾಲನೆ ಮಾಡಲು ನೀಡಿದರೆ ಸಂಬಂಧಪಟ್ಟ ವಾಹನದ ಮಾಲಿಕರಿಗೆ/ಪೋಷಕರಿಗೆ ದಂಡ, 3 ವರ್ಷ ಜೈಲು ಶಿಕ್ಷೆ ಹಾಗೂ ವಾಹನದ ನೋಂದಣಿಯನ್ನು ರದ್ದುಪಡಿಸಬಹುದಾಗಿದೆ.
Join The Telegram | Join The WhatsApp |