ದೆಹಲಿ :

ಎನ್‌ ಸಿಪಿ ಪಕ್ಷದ ಹೆಸರು ಮತ್ತು ಚಿಹ್ನೆಯನ್ನು ಅಜಿತ ಪವಾರ್‌ ಬಣಕ್ಕೆ ಕಳೆದುಕೊಂಡ ನಂತರ ಶರದ್ ಪವಾರ್ ಬಣವನ್ನು ನ್ಯಾಷನಲಿಸ್ಟ್‌ ಕಾಂಗ್ರೆಸ್‌ ಪಾರ್ಟಿ- ಶರದ್ ಚಂದ್ರ ಪವಾರ್ ಎಂದು ಚುನಾವಣಾ ಆಯೋಗವು ಹೆಸರನ್ನು ನಿಗದಿಪಡಿಸಿದೆ.

ಶರದ್ ಪವಾರ್ ಅವರು ಚುನಾವಣಾ ಆಯೋಗದ ಮುಂದೆ ಪಕ್ಷದ ಮೂರು ಹೊಸ ಹೆಸರುಗಳು ಮತ್ತು ಚಿಹ್ನೆಗಳನ್ನು ಪ್ರಸ್ತಾಪಿಸಿದ್ದರು.
ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ಚಿನ್ನೆ ಹಾಗೂ ಹೆಸರಿಗಾಗಿ ಅಧಿಕಾರಕ್ಕಾಗಿ ಚಿಕ್ಕಪ್ಪ ಶರದ್ ಪವಾರ್ ಮತ್ತು ಅಣ್ಣನ ಮಗ ಅಜಿತ್ ಪವಾರ್ ನಡುವೆ ಚುನಾವಣಾ ಆಯೋಗದ ಮುಂದೆ ತಿಕ್ಕಾಟ ನಡೆದಿತ್ತು. ಒಂದು ದಿನ ಮೊದಲು, ಚುನಾವಣಾ ಆಯೋಗವು ಅಜಿತ್ ಪವಾರ್ ಬಣವನ್ನು ನಿಜವಾದ ಎನ್‌ಸಿಪಿ ಎಂದು ತೀರ್ಪು ನೀಡಿತ್ತು. ಹಾಗೂ ಪಕ್ಷದ ಚುನಾವಣಾ ಚಿಹ್ನೆ ಗಡಿಯಾರ ಮತ್ತು ಪಕ್ಷದ ಹೆಸರನ್ನು ಸಹ ಅಜಿತ್‌ ಪವಾರ್ ಬಣಕ್ಕೆ ನೀಡಿದೆ. ಇದರ ನಂತರ, ಶರದ್ ಪವಾರ್ ಅವರಿಗೆ ಪಕ್ಷಕ್ಕೆ ಹೊಸ ಹೆಸರು ಮತ್ತು ಚಿಹ್ನೆಯನ್ನು ನಿರ್ಧರಿಸಲು ಮೂರು ದಿನಗಳ ಸಮಯ ನೀಡಿತ್ತು. ಶರದ್ ಪವಾರ್ ಅವರು ಮೂರು ಆಯ್ಕೆಗಳನ್ನು ನೀಡಿದ್ದರು, ಅವುಗಳಲ್ಲಿ ಎನ್‌ಸಿಪಿ- ಶರದ್‌ಚಂದ್ರ ಪವಾರ್ ಎಂಬ ಹೆಸರನ್ನು ನೀಡಲು ನಿರ್ಧರಿಸಲಾಗಿದೆ.