ವಾಷಿಂಗ್ಟನ್: (ಜ.20-ಸೋಮವಾರ) ಡೊನಾಲ್ಡ್‌ ಟ್ರಂಪ್‌ ಅವರು ಅಮೆರಿಕದ 47ನೇ ಅಧ್ಯಕ್ಷರಾಗಿ ಅಧಿಕೃತವಾಗಿ ಅಧಿಕಾರ ಸ್ವೀಕರಿಸಲಿದ್ದು, ಟ್ರಂಪ್‌ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ರಾಜಧಾನಿ ವಾಷಿಂಗ್ಟನ್‌ ಡಿಸಿಯಲ್ಲಿ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿವೆ. ಇದಕ್ಕೂ ಮೊದಲೇ ಟ್ರಂಪ್‌ ಬೆಂಬಲಿಗರ ಸಂಭ್ರಮಾಚರಣೆ ಆರಂಭಗೊಂಡಿದ್ದು, ಎಲ್ಲೆಡೆ ಹಬ್ಬದ ವಾತಾವರಣ ಕಂಡುಬರುತ್ತಿದೆ. ವರ್ಜೀನಿಯಾದ ಸ್ಟರ್ಲಿಂಗ್‌ನಲ್ಲಿರುವ ಟ್ರಂಪ್ ನ್ಯಾಷನಲ್ ಗಾಲ್ಫ್ ಕೋರ್ಸ್‌ನಲ್ಲಿ, ಪಟಾಕಿ ಸಿಡಿಸಿ ಟ್ರಂಪ್‌ ಬೆಂಬಲಿಗರಿಂದ ಸಂಭ್ರಮಾಚರಣೆ ನಡೆಸಲಾಗುತ್ತಿದೆ.

ಈ ಗಾಲ್ಫ್‌ ಮೈದಾನವು ಡೊನಾಲ್ಡ್‌ ಟ್ರಂಪ್‌ ಅವರಿಗೆ ಸೇರಿದ್ದಾಗಿದ್ದು, ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುವ ಒಂದು ದಿನ ಮೊದಲೇ, ಭಾರೀ ಸಂಭ್ರಮಾಚರಣೆ ಕಂಡುಬರುತ್ತಿದೆದೇಶದ ಇತರ ಭಾಗಗಳಲ್ಲಿಯೂ ಟ್ರಂಪ್‌ ಬೆಂಬಲಿಗರು ಸಂಭ್ರಮಾಚರಣೆ ಶುರುವಿಟ್ಟಿದ್ದು, ಟ್ರಂಪ್‌ ಅವರ ಎರಡನೇ ಅವಧಿಯ ಆರಂಭಕ್ಕೆ ಕಾತರದಿಂದ ಕಾಯುತ್ತಿರುವುದಾಗಿ ಅಭಿಮಾನಿಗಳು ಹೇಳಿದ್ದಾರೆ.ಈ ಕುರಿತು ಮಾತನಾಡಿರುವ ಡೊನಾಲ್ಡ್ ಟ್ರಂಪ್ ಅವರ ಬೆಂಬಲಿಗ ಮಿಶೆಲ್‌, “ಟ್ರಂಪ್‌ ಅಧಿಕಾರ ಸ್ವೀಕಾರ ಸಮಾರಂಭದ ಭವ್ಯತೆ ಕಂಡು ದಂಗಾಗಿದ್ದೇನೆ..” ಎಂದು ಹೇಳಿದ್ದಾರೆ.ಮುಂದುವರೆದು, “‌ನನ್ನ ಇಡೀ ಜೀವಮಾನದಲ್ಲಿ ಡೊನಾಲ್ಡ್ ಟ್ರಂಪ್ ಅವರು ನಾನು ಕಂಡ ಅತ್ಯುತ್ತಮ ಅಧ್ಯಕ್ಷರಾಗಿದ್ದಾರೆ.