Join The Telegram | Join The WhatsApp |
ಅಥಣಿ :
ಅಥಣಿ ವಿಧಾನಸಭಾ ಮತಕ್ಷೇತ್ರದಲ್ಲೀಗ ಕಾಂಗ್ರೆಸ್ ಯುವ ನಾಯಕ ಧರೆಪ್ಪ ಠಕ್ಕಣ್ಣವರ ಹವಾ ತುಸು ಜೋರಾಗಿದೆ. ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿರುವ ಧರೆಪ್ಪ ಠಕ್ಕಣ್ಣವರ ಅವರು ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಜೊತೆ ಅತ್ಯುತ್ತಮ ಒಡನಾಟ ಹೊಂದಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಅಥಣಿ ಮತಕ್ಷೇತ್ರದಲ್ಲಿ ಟಿಕೆಟ್ ನೀಡಿದರೆ ಕಾಂಗ್ರೆಸ್ಸಿಗೆ ಮತ್ತೆ ಈ ಕ್ಷೇತ್ರವನ್ನು ಗೆದ್ದು ತರುವುದಾಗಿ ಅವರು ತಮಗಿರುವ ಜನಬೆಂಬಲವನ್ನು ಈಗಾಗಲೇ ಮನವರಿಕೆ ಮಾಡಿಕೊಟ್ಟಿದ್ದಾರೆ.
ಧರೆಪ್ಪ ಠಕ್ಕೆಣ್ಣವರ ಕಾಂಗ್ರೆಸ್ ಪಕ್ಷದ ಅಥಣಿಯ ಯುವ ನಾಯಕರು. ಸಮಾಜ ಸೇವೆಯಲ್ಲಿ ಅತ್ಯಂತ ದೊಡ್ಡ ಹೆಸರು ಮಾಡಿದ ಯುವಕರಾಗಿದ್ದಾರೆ. ಅತ್ಯಂತ ಸಣ್ಣ ವಯಸ್ಸಿನಲ್ಲೇ ಸೇವಾ ಮನೋಭಾವದಿಂದ ರಾಜಕೀಯ ರಣರಂಗಕ್ಕೆ ಪಾದಾರ್ಪಣೆ ಮಾಡಿರುವ ಧರೆಪ್ಪ ಟಕ್ಕಣ್ಣವರ ಅಥಣಿ ತಾಲೂಕಿನ ಹಳ್ಳಿಹಳ್ಳಿಗಳಿಗೆ ಸಹಾಯ ಹಸ್ತ ಚಾಚಿದ್ದಾರೆ, ಕೊರೊನಾ ಸಂದರ್ಭದಲ್ಲಂತೂ ಅವರು ಮಾಡಿರುವ ಜನಸೇವೆಯನ್ನು ಜನ ಇಂದಿಗೂ ಮರೆತಿಲ್ಲ. ಅವರು ಮಾಡಿರುವ ಜನಸೇವೆಯಿಂದ ಅವರು ಎಲ್ಲೆಡೆಯೂ ಚಿರಪರಿಚಿತರಾಗಿದ್ದಾರೆ.
ಈ ಹಿಂದೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಗೆಲುವು ಸಾಧಿಸಿದ್ದ ಮಹೇಶ್ ಕುಮಟಳ್ಳಿ ಬದಲಾದ ಸನ್ನಿವೇಶದಲ್ಲಿ ಅಪರೇಶನ್ ಕಮಲದ ಮೂಲಕ ಬಿಜೆಪಿ ಸೇರ್ಪಡೆಗೊಂಡಿದ್ದರು. ಇದರಿಂದ ಅಥಣಿಯಲ್ಲಿ ಕಾಂಗ್ರೆಸ್ ಬಹುತೇಕ ನಾಮಾವಶೇಷಗೊಂಡಿತ್ತು. ಆದರೆ ಇದನ್ನು ಸವಾಲಾಗಿ ತೆಗೆದುಕೊಂಡಿದ್ದ ಅವರು ಪಕ್ಷವನ್ನು ಕಟ್ಟುವ ಜವಾಬ್ದಾರಿಯನ್ನು ವಹಿಸಿಕೊಂಡು ಅತ್ಯಂತ ಅಚ್ಚುಕಟ್ಟು ಹಾಗೂ ಸಂಘಟನಾತ್ಮಕವಾಗಿ ಅಥಣಿ ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷವನ್ನು ಅತ್ಯಂತ ಪ್ರಬಲವಾಗಿ ಕಟ್ಟಿ ಬೆಳೆಸುವಲ್ಲಿ ತಮ್ಮ ಕೊಡುಗೆ ನೀಡಿದ್ದಾರೆ.
ನಿಬ್ಬೆರಗಾಗುವ ರೀತಿಯಲ್ಲಿ ಪಕ್ಷಕ್ಕೆ ನವಚೈತನ್ಯ ತಂದಿರುವ ಈ ಯುವ ನಾಯಕನ ಕ್ರಿಯಾಶೀಲತೆ ಹಾಗೂ ಸಂಘಟನಾತ್ಮಕ ಚಾತುರ್ಯಕ್ಕೆ ಪಕ್ಷದ ಹಿರಿಯರೇ ಶಹಬ್ಬಾಸ್ ಗಿರಿ ನೀಡಿರುವುದು ಅವರ ನಾಯಕತ್ವಕ್ಕೆ ಹಿಡಿದ ಕೈಗನ್ನಡಿಯನ್ನಬಹುದು.
ಇಡೀ ಜಗತ್ತಿಗೆ ಕೊರೊನಾ ಕಾಯಿಲೆ ಆವರಿಸಿದಾಗ ಅಥಣಿಯಲ್ಲೂ ಜನ ತೀವ್ರ ತೊಂದರೆ ಅನುಭವಿಸಿದ್ದರು. ಆ ಸಂದರ್ಭದಲ್ಲಿ ಪ್ರತಿದಿನ 600 ಕ್ಕೂ ಅಧಿಕ ಊಟದ ಪೊಟ್ಟಣ ಹಾಗೂ ಇದರ ಮೂಲಭೂತ ವ್ಯವಸ್ಥೆ ಜನರಿಗೆ ಒದಗಿಸಿಕೊಟ್ಟು ಜನರ ಪಾಲಿಗೆ ಆಶಾಕಿರಣವಾಗಿ ಗೋಚರಿದ್ದರು.
ಕೊರೊನಾ ವಾರಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದ ವೈದ್ಯರು, ಪೊಲೀಸರು ಹಾಗೂ ಇತರ ಸೇವಾ ಕಾರ್ಯ ಕೈಗೊಳ್ಳುತ್ತಿದ್ದ ಸಿಬ್ಬಂದಿಗೆ ಅವರ ಅಗತ್ಯ ಸೇವೆ ಮನಗಂಡು ಅವುಗಳನ್ನು ನೀಡಿದ್ದರು. ಅಷ್ಟೊಂದು ಬದ್ಧತೆಯಿಂದ ಅವರು ಕೊರೊನಾ ಕಾಲಘಟ್ಟದಲ್ಲಿ ಜನಸೇವೆಗೆ ತಮ್ಮನ್ನು ತೆರೆದುಕೊಂಡಿದ್ದರು. ಯಾವುದೇ ಸಂದರ್ಭದಲ್ಲಿ ಜನ ಸಂಕಟ ಎದುರಿಸುತ್ತಿದ್ದರೂ ಅವರಲ್ಲಿಗೆ ಹೋಗಿ ಸಹಾಯ ನೀಡುವುದು ಅವರಿಗೆ ಮೊದಲಿನಿಂದಲೂ ಅಚ್ಚುಮೆಚ್ಚು. ಹೀಗಾಗಿ ಅವರು ಕಾಲಕಾಲಕ್ಕೆ ಜನರ ಬಳಿ ತೆರಳಿ ಸಹಾಯ ನೀಡುತ್ತಾ ಬಂದಿರುವುದನ್ನು ಕಾಣಬಹುದು. ಮಹಾರಾಷ್ಟ್ರದಲ್ಲಿ ಸುರಿದ ಭಾರಿ ಮಳೆಯಿಂದ ಕೃಷ್ಣಾ ನದಿಗೆ ದೊಡ್ಡ ಪ್ರಮಾಣದಲ್ಲಿ ಪ್ರವಾಹ ಬಂದಿತ್ತು. ಅಥಣಿ, ಜಮಖಂಡಿ ತಾಲೂಕಿನ ಜನತೆ ನೆರೆ ಪ್ರವಾಹದಲ್ಲಿ ಸಿಲುಕಿದ್ದರು. ಆ ಸಂದರ್ಭದಲ್ಲಿ ಜನರ ನೋವಿನಲ್ಲಿ ಧರಪ್ಪ ಠಕ್ಕೆಣ್ಣವರ ಭಾಗಿಯಾಗಿದ್ದರು. ಸಮಾಜ ಸೇವೆ ಎಂದರೆ ಸದಾ ಮುಂದೆ ಇರುವ ಅವರಿಗೆ ಅಥಣಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ಪ್ರಬಲವಾಗಿ ಕಟ್ಟಿ ಬೆಳೆಸುವ ಅದಮ್ಯ ತುಡಿತ. ಪಕ್ಷದ ಸೇವಾ ಕಾರ್ಯಗಳಿಗೆ ಅವರು ದುಡಿಯುತ್ತಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದ ಕಾಂಗ್ರೆಸ್ಸಿಗೆ ಮತ್ತೆ ಜಯಭೇರಿ ದೊರಕಿಸಿ ಕೊಡಬೇಕು ಎನ್ನುವ ಛಲದಿಂದ ಅಥಣಿ ಮತಕ್ಷೇತ್ರದಲ್ಲಿ ಕೈ ಪಕ್ಷವನ್ನು ಬೆಳೆಸುವ ಕನಸು ಕಂಡಿದ್ದಾರೆ.
ಮಾತ್ರವಲ್ಲ ಆ ದಿಸೆಯಲ್ಲಿ ಮತ್ತೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಜಯ ತಂದು ಕೊಡುವ ಶಕ್ತಿ ತಮಗೆ ಇದೆ ಎನ್ನುವುದು ಅವರ ವಿಶ್ವಾಸ ನುಡಿ.
ಪಕ್ಷ ಇವರಲ್ಲಿನ ಕ್ರಿಯಾಶೀಲತೆ ಹಾಗೂ ನಾಯಕತ್ವ ಗುಣಗಳನ್ನು ಗಮನಿಸಬೇಕು. ಇವರಿಗೆ ಟಿಕೆಟ್ ನೀಡಿದರೆ ಪಕ್ಷಕ್ಕೆ ಒಂದು ಸ್ಥಾನ ನಿರಾಯಾಸವಾಗಿ ದೊರೆಯುವುದರಲ್ಲಿ ಯಾವುದೇ ಸಂದೇಹ ಇರದು ಎನ್ನುವುದು ಕಾಂಗ್ರೆಸ್ ಕಾರ್ಯಕರ್ತರ ಒಟ್ಟಾರೆ ಅಭಿಪ್ರಾಯವಾಗಿದೆ.
Join The Telegram | Join The WhatsApp |