ಬೆಂಗಳೂರು: ತಮ್ಮ ಮದುವೆ ಕುರಿತ ಊಹಾಪೋಹಕ್ಕೆ ಕೊನೆಗೂ ತೆರೆ ಎಳೆಯಲು ಖ್ಯಾತ ನಿರೂಪಕಿ ಮುಂದಾಗಿದ್ದಾರೆ. ಹೋದಲ್ಲಿ ಬಂದಲ್ಲಿ ನಿಮ್ಮ ಮದುವೆ ಯಾವಾಗ ಎಂದು ಕೇಳುತ್ತಿದ್ದ ಅಭಿಮಾನಿಗಳಿಗೆ ಕೊನೆಗೂ ಗುಡ್ ನ್ಯೂಸ್ ಕೊಡುತ್ತಾರಂತೆ ಈ ನಿರೂಪಕಿ.
ನಾನೀಗ ಮದುವೆಯಾಗಲು ನಿರ್ಧರಿಸಿದ್ದೇನೆ. ದಯವಿಟ್ಟು ನನ್ನ ಕನಸಿನ ಹುಡುಗನನ್ನು ಹುಡುಕಿ ಕೊಡಿ. ನೀವು ಎಷ್ಟು ಬೇಗ ಹುಡುಕಿ ಕೊಡುತ್ತಿರೋ ಅಷ್ಟು ಬೇಗ ನಿಮಗೆ ಊಟ ಸಿಗುತ್ತದೆ, ಇದು ನನ್ನ ಗ್ಯಾರಂಟಿ ಎಂದು ಇದೀಗ ಖ್ಯಾತ ನಿರೂಪಕಿ ಅನುಶ್ರೀ ಪ್ರತಿಕ್ರಿಯೆ ನೀಡಿದ್ದಾರೆ.
ತುಳುನಾಡಿನಲ್ಲಿ ನೀಡಿದ ಸಂದರ್ಶನದಲ್ಲಿ ಮದುವೆಯಾಗುವ ತಮ್ಮ ನಿರ್ಧಾರವನ್ನು ಅನುಶ್ರೀ ಕೊನೆಗೂ ಘೋಷಣೆ ಮಾಡಿದ್ದಾರೆ. ನಾನು ಮದುವೆ ಅಗಲಿದ್ದೇನೆ. ನನ್ನ ತಂದೆ-ತಾಯಿಯ ದಾಂಪತ್ಯದ ಕಹಿ ಅನುಭವವನ್ನು ಕಣ್ಣಾರೆ ಕಂಡಿದ್ದ ನನಗೆ ಮದುವೆ ಎಂದರೆ ನೋವು ತರುವ ಸಂಗತಿಯಾಗಿತ್ತು. ನಾನು ನನ್ನ ಮದುವೆ ಬಗ್ಗೆ ಯೋಚಿಸಿದಾಗ ನನಗೆ ಮದುವೆ ಬೇಡ ಎನಿಸಿತ್ತು.
ಅದರಲ್ಲೂ ನನ್ನ ಪೋಷಕರ ಮದುವೆ ಮುರಿದು ಬಿದ್ದ ನಂತರ ನಾನು ನಿರಾಸೆಗೊಂಡಿದ್ದ. ಮದುವೆಯಾಗುವುದರಲ್ಲಿ ಯಾವುದೇ ಅರ್ಥ ಇಲ್ಲ ಎಂದುಕೊಂಡಿದ್ದೆ. ಜೀವನದಲ್ಲಿ ಮದುವೆ ಕಹಿ ಘಟನೆ ಆಗಲೇಬೇಕು ಎಂದೇನಿಲ್ಲ. ಅದು ಸುಮಧುರ ಕೂಡ ಆಗಬಹುದು ಎನಿಸುತ್ತದೆ. ಆದ್ದರಿಂದ ನಾನು ಮದುವೆಯಾಗಲು ನಿರ್ಧರಿಸಿದ್ದೇನೆ. ಮದುವೆ ಬೇಡ ಎನ್ನುತ್ತಿದ್ದವಳು ಈಗ ಮದುವೆಗೆ ಹಸಿರು ನಿಶಾನೆ ನೀಡಿದ್ದೇನೆ. ಆದರೆ ಎಲ್ಲರಿಗೂ ನಾನು ಒಂದು ವಿನಂತಿ ಮಾಡಿಕೊಳ್ಳುತ್ತಿದ್ದೇನೆ. ನನಗೆ ಇದು ಎರಡನೇ ಅಥವಾ ಮೂರನೇ ಮದುವೆ ಅಲ್ಲ. ನನಗೆ ಇನ್ನೂ ಮದುವೆ ಆಗಿಲ್ಲ ಎಂದು ಸ್ಪಷ್ಟವಾಗಿ ನಾನು ಹೇಳುತ್ತಿದ್ದೇನೆ.ಯಾಕೆಂದರೆ ನನಗೆ ಬಹಳಷ್ಟು ಜನ ಈಗಾಗಲೇ ಮದುವೆ ಮಾಡಿಬಿಟ್ಟಿದ್ದೀರಿ. ಒಂದು ಸಲ ನಟ ರಕ್ಷತ್ ಶೆಟ್ಟಿ ಜೊತೆ ಮದುವೆ ಮಾಡಿಸಿದ್ದೀರಿ. ಇನ್ನೊಬ್ಬ ನನ್ನ ಕಸಿನ್ ಗಂಡನ ಜೊತೆಯಲ್ಲೂ ಮದುವೆ ಆಗಿ ಹೋಗಿದೆಯಂತೆ. ಅದನ್ನು ನನ್ನ ಕಸಿನ್ ಕಾಲ್ ಮಾಡಿ ಹೇಳಿ ನಕ್ಕಿದ್ದಾಳೆ .ಆದರೆ ನನಗೆ ನಿಜವಾಗಿಯೂ ಮದುವೆ ಆಗಿಲ್ಲ. ಈ ಮೂಲಕ ಅನುಶ್ರೀ ಅವರು ಕನ್ನಡಿಗರಲ್ಲಿ ತನ್ನ ಮದುವೆ ಕುರಿತ ವದಂತಿಗೆ ಮತ್ತೊಂದು ಟ್ವಿಸ್ಟ್ ನೀಡಿದ್ದಾರೆ. ಕೊನೆಗೂ ಅನುಶ್ರೀ ಯಾವಾಗ ಮದುವೆ ಆಗಲಿದ್ದಾರೆ ಎನ್ನುವುದಕ್ಕೆ ಕಾಲವೇ ಉತ್ತರ ಹೇಳಬೇಕಾಗಿದೆ.