
ಮಂದಾರ್ತಿ: ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವರ ಸನ್ನಿಧಿಯಲ್ಲಿಂದು ಶ್ರೀ ಕ್ಷೇತ್ರ ಮಂದಾರ್ತಿಯ ಒಂಬತ್ತನೇ ವರ್ಷದ ಮಳೆಗಾಲದ ಎರಡು ಮೇಳಗಳ ಪ್ರಥಮ ದೇವರ ಸೇವೆ ಆಟ ಆರಂಭವಾಗಿದೆ.
ಬಾರಾಳಿ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಗಣಹೋಮ, ಮಧ್ಯಾಹ್ನ 12 ಕ್ಕೆ ಶ್ರೀ ಕ್ಷೇತ್ರದಲ್ಲಿ ಮೇಳದ ಶ್ರೀ ಮಹಾಗಣಪತಿ ಪೂಜೆ ನಡೆಯಿತು. ರಾತ್ರಿ 8:30ಕ್ಕೆ ಚೌಕಿಯಲ್ಲಿ ಗಣಪತಿ ಪೂಜೆ ಮತ್ತು ಎರಡು ಮೇಳಗಳ ಪ್ರಥಮ ದೇವರ ಸೇವೆ ಆಟ ಆರಂಭವಾಗಲಿದೆ.