ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯ ಅಧೀನದ ಪದವಿ ಕಾಲೇಜುಗಳಲ್ಲಿ ಈ ಸಾಲಿನ ಪದವಿ ತರಗತಿಗಳನ್ನು ಆಗಸ್ಟ್ 16 ರಿಂದ ಆರಂಭಿಸುವ ಸಾಧ್ಯತೆ ಇದೆ. ಕುಲಪತಿ ಪ್ರೊ. ಪಿ.ಎಲ್.ಧರ್ಮ ಅವರು ಈ ಬಗ್ಗೆ ವಿಶ್ವವಿದ್ಯಾಲಯ ವ್ಯಾಪ್ತಿಯ ಕಾಲೇಜು ಪ್ರಾಂಶುಪಾಲರ ಸಭೆ ನಡೆಸಿದ್ದು ಜುಲೈ ಆಗಸ್ಟ್ 16ರಂದು ತರಗತಿ ನಡೆಸಲು ಅಂತಿಮ ನಿರ್ಧಾರಕ್ಕೆ ಬರಲಾಗಿದೆ.