ಬೆಳಗಾವಿ: ಬೆಳಗಾವಿಯ ಬಸವನ ಗಲ್ಲಿಯಲ್ಲಿರುವ ಜಿನ ಮಂದಿರದ ಮೂಲನಾಯಕ ಶ್ರೀ 1008 ಭ. ನೇಮಿನಾಥ ತೀರ್ಥಂಕರ, ಶಿಖರಸ್ಥ ಶ್ರೀ 1008 ಭ. ಪಾರ್ಶ್ವನಾಥ ತೀರ್ಥಂಕರ ವೇದಿ ಪ್ರತಿಷ್ಠಾಪನೆಯ ಮಹಾ ಮಹೋತ್ಸವ ಹಾಗೂ ವಿಶ್ವಶಾಂತಿ ಮಹಾಯಾಗದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮಂಗಳವಾರ ಭಾಗವಹಿಸಿದ್ದರು.

ಈ‌ ಸಮಯದಲ್ಲಿ ಜಿನಮಂದಿರದ ಸಮಸ್ತ ಶ್ರಾವಕ, ಶ್ರಾವಕಿಯರು, ಪಂಚ ಕಮೀಟಿ, ಸರ್ವ ಟ್ರಸ್ಟಿ ಸದಸ್ಯರು, ಯುವ ಕಾಂಗ್ರೆಸ್ ಮುಖಂಡ ಮೃಣಾಲ ಹೆಬ್ಬಾಳಕರ್, ಪೂಜಾ ಕಮೀಟಿಯ ಸದಸ್ಯರು, ಮಹಿಳಾ ಮಂಡಳ ಹಾಗೂ ಸೇವಾದಳದವರು ಇದ್ದರು.