ಬೆಳಗಾವಿ : ರವಿವಾರಪೇಟೆಯ ಪಾಟೀಲ ಮಾಳದಲ್ಲಿ ಅನಿಲ್ ಧಾಮಣೇಕರ (43) ಎಂಬ ವ್ಯಕ್ತಿಗೆ ಚಾಕುವಿನಿಂದ ಇರಿಯಲಾಗಿದೆ.
ಬುಧವಾರ ರಾತ್ರಿ ಘಟನೆ ನಡೆದಿದ್ದು ಜಾಗದ ವಿಚಾರದಲ್ಲಿ ನಡೆದ ವಿವಾದ ಚಾಕು ಇರಿತದವರೆಗೂ ಮುಂದುವರಿದಿದೆ. ಅನಿಲ್ ಅಣ್ಣನ ಮಗ ಕೃತ್ಯ ಎಸಗಿದ್ದು ಖಡೇ ಬಜಾರ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.