ಬೆಳಗಾವಿ : ಬಿಜೆಪಿಯ ಪ್ರತಿಷ್ಠಿತ ಕುಟುಂಬ ಹಾಗೂ ಮಾಜಿ ಸಚಿವೆ ಶಶಿಕಲಾ ಜೊಲ್ಲೆ, ಮಾಜಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಕುಟುಂಬ ವಕ್ಫ್ ಕಣ್ಣು ಹಾಕಿದೆ ಎಂಬ ಮಾಹಿತಿ ಹೊರಬಂದಿದೆ.

ಚಿಕ್ಕೋಡಿಯ ಶಶಿಕಲಾ ಹಾಗೂ ಅಣ್ಣಾಸಾಹೇಬ ಜೊಲ್ಲೆ ದಂಪತಿ ಪುತ್ರ ಬಸವಪ್ರಸಾದ ಜೊಲ್ಲೆ ಹೆಸರಲ್ಲಿರುವ ಸ್ವ ಗ್ರಾಮ ಯಕ್ಸಂಬಾದಲ್ಲಿ ಜಮೀನಿಗೆ ವಕ್ಫ್ ನ ಹೆಸರು ನೊಂದಣಿ ಇರುವುದು ಕಂಡು ಬಂದಿದೆ. ಜೊತೆಗೆ ಜೊಲ್ಲೆ ಕುಟುಂಬದ ಹಲವು ಜನರ ಜಮೀನಿಗೂ ವಕ್ಫ್ ಆಸ್ತಿಯ ಹೆಸರು ಅಂಟಿಕೊಂಡಿದೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಗ್ರಾಮದಲ್ಲಿ ಇದು ಪತ್ತೆಯಾಗಿದೆ. ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಗ್ರಾಮದ ಹಲವಾರು ರೈತರ ಜಮೀನಿಗೆ ವಕ್ಫ್ ಹೆಸರು ಪತ್ತೆಯಾಗಿರುವದು ಬೆಳಕಿಗೆ ಬಂದಿದೆ.

ಬಿಜೆಪಿಯ‌ ಶಾಸಕಿ ಕುಟುಂಬಕ್ಕೆ ವಕ್ಫ್ ಹೆಸರು ಕಂಡು ಜನಸಾಮಾನ್ಯರು, ರೈತರು‌ ದಂಗಾಗಿದ್ದಾರೆ. ಸ್ಪಷ್ಟವಾಗಿ ತಾಂತ್ರಿಕ ದೋಷದ ನಿವಾರಣೆ ನೀಡದ ಸರ್ಕಾರದ ವಿರುದ್ಧ ಆಕ್ರೋಶ ಕೆಲ ರೈತರು ಹೊರ ಹಾಕುತ್ತಿದ್ದಾರೆ.