ಬೆಳಗಾವಿ :
ಅಂತ್ಯಸಂಸ್ಕಾರಕ್ಕೆಂದು ಸಿದ್ಧತೆ ಮಾಡುತ್ತಿದ್ದರು. ಸಿದ್ಧತೆ ನಡೆಸುತ್ತಿದ್ದಾಗ ಅಲ್ಲಿಗೆ ಬಂದ ಭೂ ಮಾಲೀಕ ಶವಸಂಸ್ಕಾರ ಇಲ್ಲಿ ಮಾಡಬೇಡಿ ಎಂದು ಆಕ್ಷೇಪವನ್ನು ಸಲ್ಲಿಸಿದ್ದಾರೆ. ಕೋರ್ಟ್ನಿಂದ ತಡೆಯಾಜ್ಞೆಯನ್ನು ತಂದ ಘಟನೆ ಬೆಳಗಾವಿ ತಾಲೂಕಿನ ಕವಳೇವಾಡಿ ಗ್ರಾಮದಲ್ಲಿ ನಡೆದಿದೆ.
ಕವಳೇವಾಡಿಯಲ್ಲಿ ಶುಕ್ರವಾರ ರಾತ್ರಿ ಅನಾರೋಗ್ಯದಿಂದ ತುಕಾರಾಮ ಮೋರೆ ಮೃತಪಟ್ಟಿದ್ದರು. ಸ್ಮಶಾನ ಭೂಮಿ ಇಲ್ಲದ ಕಾರಣಕ್ಕೆ ಗ್ರಾಮಸ್ಥರು, ಓಮನಿ ಗಾವಡೆ ಎಂಬುವವರ ಜಾಗದಲ್ಲಿ ಅಂತ್ಯಕ್ರಿಯೆ ನೆರವೇರಿಸಲು ಮುಂದಾಗಿದ್ದರು. ಆದರೆ ಓಮನಿ ಗಾವಡೆ ಅವರು ವಿರೋಧ ವ್ಯಕ್ತಪಡಿಸಿದರು. ಗ್ರಾಮಸ್ಥರು ಶವವಿಟ್ಟು ಪ್ರತಿಭಟಿಸಿದರು.
ಸ್ಮಶಾನದ ಭೂಮಿ ಇಲ್ಲದ ಕಾರಣಕ್ಕೆ ಈ ಮೊದಲು ಇಲ್ಲಿಯೇ ಗ್ರಾಮಸ್ಥರು ಅಂತ್ಯಕ್ರಿಯೆ ನೆರವೇರಿಸುತ್ತಿದ್ದರು. ಆದರೆ ಕೆಲ ದಿನಗಳ ಹಿಂದೆ ನ್ಯಾಯಾಲಯದ ಮೊರೆ ಹೋಗಿದ್ದ ಓಮನಿ ಗಾವಡೆ ಅವರ ಪರವಾಗಿ ಆದೇಶ ಬಂದಿತ್ತು. ಹೀಗಾಗಿ ನನ್ನ ಜಮೀನಿನಲ್ಲಿ ಅಂತ್ಯ ಸಂಸ್ಕಾರವನ್ನು ಮಾಡಬೇಡಿ ಎಂದು ಆಕ್ಷೇಪವನ್ನು ವ್ಯಕ್ತಪಡಿಸಿದ್ದಾರೆ.
ಕೊನೆಗೂ ಇದೇ ಸ್ಥಳದಲ್ಲಿ ಮಹಿಳೆಯರಿಂದಲೇ ಅಂತ್ಯ ಸಂಸ್ಕಾರ ನೆರವೇರಿತು.