ಬೆಂಗಳೂರು: ಸ್ಥಳೀಯ ಹಾಗೂ ಜಾಗತಿಕ ಮಟ್ಟದ ಆಹಾರ ಸಂಸ್ಕೃತಿಯ ಬಗ್ಗೆ ಮಾಹಿತಿ ಬಿತ್ತರಿಸುವ ಟೇಸ್ಟ್ ಅಟ್ಲಾಸ್ ವೆಬ್ಸೈಟ್ ಜಗತ್ತಿನ 50 ಅತ್ಯುತ್ತಮ ಚಿಕನ್ ಖಾದ್ಯಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಪಟ್ಟಿಯಲ್ಲಿ ಕೋರಿಯನ್ ಪ್ರೈಡ್ ಚಿಕನ್ ಮೊದಲನೇ ಸ್ಥಾನ ಪಡೆದಿದ್ದು ಜಗತ್ತಿನ ಅತ್ಯುತ್ತಮ ಚಿಕನ್ ಖಾದ್ಯ ಎಂದು ಟೇಸ್ಟ್ ಅಟ್ಲಾಸ್ ಹೇಳಿದೆ.
ಈ ಎಲ್ಲ 50 ಚಿಕನ್ ಖಾದ್ಯಗಳು ಜಗತ್ತಿನ ಬೇರೆ ಬೇರೆ ದೇಶಕ್ಕೆ ಸಂಬಂಧಿಸಿವೆ. ಅತ್ಯುತ್ತಮ ರೇಟಿಂಗ್ ಹೊಂದಿರುವ ಖಾದ್ಯಗಳ ಪಟ್ಟಿಯನ್ನು ಟೇಸ್ಟ್ ಅಟ್ಲಾಸ್ ವೆಬ್ಸೈಟ್ ನೀಡಿದೆ.
ಪಟ್ಟಿಯಲ್ಲಿ ಭಾರತದ ನಾಲ್ಕು ಚಿಕನ್ ಖಾದ್ಯಗಳು ಸ್ಥಾನ ಪಡೆದಿವೆ. ಭಾರತ ಬಗೆ ಬಗೆಯ ಚಿಕನ್ ಖಾದ್ಯಗಳ ತವರು.
ಭಾರತದ ಬಟರ್ ಚಿಕನ್ ನಾಲ್ಕನೇ ಸ್ಥಾನ, ಚಿಕನ್ ಟಿಕ್ಕಾ ಆರನೇ ಸ್ಥಾನ, ಚಿಕನ್ 65 ಹತ್ತನೇ ಸ್ಥಾನ ಮತ್ತು ತಂದೂರಿ ಚಿಕನ್ ಹದಿನೆಂಟನೇ ಸ್ಥಾನ ಪಡೆದಿವೆ.