ಬೆಳಗಾವಿ: ಮಹಾನಗರ ಪಾಲಿಕೆ ಮೇಲೆ ಲೋಕಾಯುಕ್ತ ಎಸ್.ಪಿ. ಹನುಮಂತ ರಾಯ ಅವರ ನೇತೃತ್ವದಲ್ಲಿ ಮಂಗಳವಾರ ದಿಢೀರ್ ದಾಳಿ ನಡೆಸಲಾಗಿದೆ.

ಲೋಕಾಯುಕ್ತ ಅಧಿಕಾರಿಗಳು ಈ ಸಂಬಂಧ ಕಾಗದಪತ್ರಗಳನ್ನು ಪರಿಶೀಲನೆ ನಡೆಸಿದ್ದಾರೆ. ಸಾರ್ವಜನಿಕರು ಮಹಾನಗರ ಪಾಲಿಕೆ ಆಡಳಿತದ ಮೇಲೆ ಭ್ರಷ್ಟಾಚಾರ ಆರೋಪ ನಡೆಸಿರುವ ಹಿನ್ನೆಲೆಯಲ್ಲಿ ಲೋಕಾಯುಕ್ತರು ದಾಳಿ ನಡೆಸಿದ್ದಾರೆ. ಪಾಲಿಕೆ ಕಚೇರಿಯಲ್ಲಿ ಸಾರ್ವಜನಿಕರ ಅರ್ಜಿ ವಿಳಂಬ ಆಗುತ್ತಿರುವ ಬಗ್ಗೆ ದೂರು ಬಂದಿವೆ. ಹೀಗಾಗಿ ಲೋಕಾಯುಕ್ತರು ದಾಳಿ ನಡೆಸಿದ್ದಾರೆ. ಕಟ್ಟಡ ಪರವಾನಿಗೆ ವಿಭಾಗದಲ್ಲಿ ಲೋಕಾಯುಕ್ತರು ಪರಿಶೀಲಿಸಿದ್ದಾರೆ. ವಿಭಾಗದ ಮುಖ್ಯಸ್ಥ ವಾಹಿದ್ ಅತ್ತಾರ ಅವರ ವಿಚಾರಣೆಯನ್ನು ಸಹಾ ನಡೆಸಿದ್ದಾರೆ. ಪಾಲಿಕೆ ಆಯುಕ್ತ ಲೋಕೇಶ್ ಕುಮಾರ್ ಅವರನ್ನು ಕರೆಸಿ, ಚರ್ಚಿಸಿದರು. ಲೋಕಾಯುಕ್ತ ಎಸ್ಪಿ ಹನುಮಂತ ರಾಯ ಸೇರಿದಂತೆ ಹತ್ತಕ್ಕೂ ಹೆಚ್ಚು ಲೋಕಾಯುಕ್ತ ಅಧಿಕಾರಿಗಳು ಭಾಗವಹಿಸಿದ್ದರು.

ಆರೋಗ್ಯ ವಿಭಾಗದಲ್ಲಿ ವ್ಯವಸ್ಥಿತ ದಾಖಲೆ ಇಲ್ಲದೇ ಇರುವುದು, ದರಪಟ್ಟಿ ಇಲ್ಲದೆ ಜನರಿಗೆ ಸಮಸ್ಯೆ ಆಗುವ ನಿಟ್ಟಿನಲ್ಲಿ ಪಾಲಿಗೆ ಆಯುಕ್ತರು ಅಧಿಕಾರಿಗಳ ವಿರುದ್ಧ ಲೋಕಾಯುಕ್ತರು ಅಸಮಾಧಾನ ವ್ಯಕ್ತಪಡಿಸಿದರು ಎನ್ನಲಾಗಿದೆ.