ಬೆಳಗಾವಿ :
ಭಾನುವಾರ ಮನೆ ಬಿಟ್ಟು ಹೋಗಿದ್ದ ಹೊಸ ವಂಟಮುರಿ ಗ್ರಾಮದ ಪ್ರೇಮಿಗಳು ಮಂಗಳವಾರ ಬೆಳಗಾವಿ ಪೊಲೀಸ್ ಆಯುಕ್ತರ ಕಚೇರಿಗೆ ಬಂದು ನಮಗೆ ಪ್ರಾಣ ಬೆದರಿಕೆ ಇದ್ದು ರಕ್ಷಣೆ ನೀಡಬೇಕು ಎಂದು ಪೊಲೀಸರ ಮೊರೆ ಹೋಗಿದ್ದಾರೆ.

ಪ್ರೇಮಿಗಳು ಒಂದೇ ಸಮುದಾಯಕ್ಕೆ ಸೇರಿದವರಾಗಿದ್ದರೂ ಸಹಾ ಯುವತಿಯ ಮನೆಯಲ್ಲಿ ವಿವಾಹಕ್ಕೆ ಆಕ್ಷೇಪ ಇತ್ತು. ಪರಸ್ಪರ ಪ್ರೀತಿಸುತ್ತಿದ್ದರು. ಇದನ್ನು ಗಮನಿಸಿದ ಯುವತಿಯ ಮನೆಯವರು ಬೇರೆ ವರದೊಂದಿಗೆ ನಿಶ್ಚಿತಾರ್ಥ ಮಾಡಿ ಮದುವೆಗೆ ಸಿದ್ಧತೆ ನಡೆಸಿದ್ದರು. ಆದರೆ, ಅಷ್ಟರಲ್ಲೇ ಭಾನುವಾರ ರಾತ್ರಿ ಮನೆ ಬಿಟ್ಟು ಓಡಿ ಹೋಗಿದ್ದ ಹಿನ್ನೆಲೆಯಲ್ಲಿ ಯುವತಿಯ ಪಾಲಕರು ಹಾಗೂ ಸಂಬಂಧಿಕರು ಯುವಕನ ತಾಯಿಯನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಹಲ್ಲೆ ಎಸೆಗಿದ್ದರು. ಇದೀಗ ಈ ಪ್ರೇಮಿಗಳು ಪೊಲೀಸರಲ್ಲಿ ರಕ್ಷಣೆ ಕೋರಿದ್ದಾರೆ.