ಪುತ್ತೂರು; ಪುತ್ತೂರು ಸರಕಾರಿ ಆಸ್ಪತ್ರೆಯ ಬಳಿ ಖಾಲಿ ಇರುವ ೮೦ ಸೆಂಟ್ಸ್ ಜಾಗದಲ್ಲಿ ೧೦ ಸೆಂಟ್ಸ್ ಜಾಗವನ್ನು ಪ್ರಿಯದರ್ಶಿನಿ ಟ್ರಸ್ಟ್ ಸಂಸ್ಥೆಯು ತಮಗೆ ಮಂಜೂರು ಮಾಡಿಸಿಕೊಡುವಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ ತಾನು ಟ್ರಸ್ಟ್ ಪರವಾಗಿ ಪತ್ರವನ್ನು ನೀಡಿದ್ದು ನಿಜ.
ಹೀಗೆಂದು ಶಾಸಕ ಅಶೋಕ್ ರೈ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಆಸ್ಪತ್ರೆಯ ಬಳಿಯ ರಸ್ತೆಯ ಇನ್ನೊಂದು ಬದಿಯಲ್ಲಿ ಈ ಜಾಗವಿರುವ ಕಾರಣ ಅದು ಬಳಕೆಗೆ ಬರಲಿಕ್ಕಿಲ್ಲ ಎಂಬ ಕಾರಣಕ್ಕೆ ಪ್ರಸ್ತಾವನೆಯನ್ನು ಕಳುಹಿಸಿದ್ದೆ. ನನ್ನ ಪ್ರಸ್ತಾವನೆಯು ವಿವಿಧ ಇಲಾಖೆಗೆ ನಿರಪೇಕ್ಷಣಾ ಪತ್ರಕ್ಕಾಗಿ ಕಳುಹಿಸಲ್ಪಟ್ಟಿದ್ದು ಕಾ ನೂನು ಪ್ರಕಾರ ಈ ಜಾಗ ಮಂಜೂರಾತಿಗೆ ಸಾಧ್ಯವಿಲ್ಲ ಎಂಬ ಕಾರಣಕ್ಕೆ ಜಮೀನು ಮಂಜೂರಾತಿಗಾಗಿ ಕಳುಹಿಸಿದ್ದ ಪ್ರಸ್ತಾವನೆಯನ್ನು ರದ್ದು ಮಾಡುಂತೆ ಸೂಚನೆ ನೀಡಿದ್ದೇನೆ.ಸಾರ್ವಜನಿಕ ಸರಕಾರಿ ಆಸ್ಪತ್ರೆಗೆ ಮೀಸಲಾದ ಜಾಗವನ್ನು ಯಾವುದೇ ಕಾರಣಕ್ಕೂ ಟ್ರಸ್ಟ್‌ಗೆ ನೀಡಲು ಸಾಧ್ಯವಿಲ್ಲ ಎಂದು ಟ್ರಸ್ಟ್ ಪ್ರಮುಖರಿಗೆ ತಿಳಿಸಿದ್ದೆ. ಇದರಲ್ಲಿ ಯಾವುದೇ ಗೊಂದಲವಿಲ್ಲ ಎಂದು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.