Join The Telegram | Join The WhatsApp |
(ನಾನು ಕಂಡಂತೆ ಬ್ರಹ್ಮ ಕುಮಾರೀಸ್)
ನೇರ ವರದಿ ಬರಹ
ಮೌಂಟ್ ಅಬು ವಿನ ಶಿಖರ ಕಣಿಗಳು ಪ್ರಜಾಪಿತ ಬ್ರಹ್ಮ ಕುಮಾರೀಸ್ ಮುಖ್ಯ ಕೇಂದ್ರ ಶಾಂತಿವನದಿಂದ………
ಬರಹ: ಲೇಖನ:
ಎಸ್ ಸತೀಶ್ ಕುಮಾರ್ ಕೋಟೇಶ್ವರ ಸಂಪಾದಕರು ಅಧ್ಯಾತ್ಮ ರಹಸ್ಯ ಮಾಸಪತ್ರಿಕೆ ಕೋಟೇಶ್ವರ……..
ಜಗತ್ತಿನಲ್ಲಿ ಅಡುಗೆ ಮನೆ ಎಂದರೆ ಅದೇ ದೊಡ್ಡ ಆರೋಗ್ಯ ಧಾಮ.
ಪ್ರತಿ ಮನೆಯಲ್ಲೂ ನಾರಿ ಯರು ಅಡುಗೆ ಮನೆ ಎಂದರೆ ಹೀಗೆ ಇರಬೇಕು ಎಂದು ಹೇಳುವವರೂ ಉಂಟು.ಇಂದು ಅಡುಗೆ ಮನೆ ಎಂದರೆ ಅಲ್ಲಿಂದಲೇ ಸರ್ವರಿಗೂ ಪ್ರತಿ ನಿತ್ಯ ಹೊಸ ದೇವಸ್ಥಾನ ಕ್ಕೆ ಹೊಕ್ಕಿದಂತೆ.ಇಂದು ಕೆಲವು ಕಡೆ ಅಡುಗೆ ಮನೆ ಹೇಗಿದೆ ಎಂದರೆ ಕೆಲವರ ಮನೆ ಹೋಗು ತ್ತಿದ್ದಂತೆ ಆ ಸುವಾಸನೆ ಗೆ ಒಂದೆರಡು ತುತ್ತು ಅಲ್ಲೇ ತಿಂದು ಬಿಡುವ ಅನ್ನುವಷ್ಟರ ಮಟ್ಟಿಗೆ ಬಂದು ನಿಲ್ಲುತ್ತದೆ.ಆದರೆ ಕೆಲವರ ಅಡುಗೆ ಮನೆ ಹೊಕ್ಕಿ ದಾಗ ಬರುವ ದುರ್ನಾತ ಕ್ಕೆ ಸುಸ್ತೋ ಸುಸ್ತು!……..
ಅದೇ ಪ್ರಜಾಪಿತ ಬ್ರಹ್ಮ ಕುಮಾರೀಸ್ ಮೌಂಟ್ ಶಿಖರದ ಕಣಿಗಳಲ್ಲಿ ಹೂತಿಟ್ಟ ಅಧ್ಯಾತ್ಮ ದ ಕೇಂದ್ರ ವನ್ನು ದಿನಾ ದಿನಾ ಯೋಗದ ಶಕ್ತಿಯ ಮೂಲಕ ಹೊರಗೆಳೆದ ಬ್ರಹ್ಮ ಕುಮಾರೀಸ್ ರವರು ಅಡುಗೆ ಕೇಂದ್ರ ಕ್ಕೆ ಹೊಕ್ಕಿದಂತೆ ಹೊಸ ಹೊಸ ಸುವಾಸನೆ ಘಮ ಘಮ ಮಲ್ಲಿಗೆ ಯಂತೆ ನೀಡಲ್ಪಡುವ ಆಹಾರ.ಜಗತ್ತಿನ ಏಕೈಕ ಅಡುಗೆ ಮನೆ ಎಂದರೆ ತಪ್ಪಾಗಲಾರದು. ಜಗತ್ತಿನ ಅದರಲ್ಲೂ ಭಾರತದ ಅದೆಷ್ಟೋ ಧಾರ್ಮಿಕ ಕೇಂದ್ರಗಳು ಇಂದೂ ಕೂಡ ಅನ್ನದಾನಕ್ಕೆ ಶ್ರೇಷ್ಠ ಮಾನ್ಯತೆ ಯನ್ನು ಪಡೆದಿದೆ.
ಅನ್ನಪ್ರಸಾದದ ಹೆಸರಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ, ಶ್ರೀ ಕ್ಷೇತ್ರ ಕೊಲ್ಲೂರು, ಶ್ರೀ ಕ್ಷೇತ್ರ ಮಂದಾರ್ತಿ, ಶ್ರೀ ಕ್ಷೇತ್ರ ತುಮಕೂರು ಸಿದ್ದಗಂಗಾ ಮಠ, ಶ್ರೀ ಕ್ಷೇತ್ರ ಶೃಂಗೇರಿ ಅಯ್ಯೋ ಹೇಳಲು ಹೊರಟರೆ ಒಂದೇ ಎರಡೇ!
ಹೀಗೆ ಅಂತಹ ಮತ್ತೊಂದು ಮೈಲುಗಲ್ಲು ದಾಟಿದ ಯಶಸ್ವಿ ಅಧ್ಯಾತ್ಮದ ಕೇಂದ್ರ ಪ್ರಜಾಪಿತ ಬ್ರಹ್ಮ ಕುಮಾರೀಸ್ ಮುಖ್ಯ ಕೇಂದ್ರ ಶಾಂತಿವನ ಮೌಂಟ್ ಅಬು!
ಸೋಲಾರ್ ವ್ಯವಸ್ಥೆ ಬಳಸಿ! ಕಡಿಮೆ ವ್ಯಕ್ತಿಗಳನ್ನು ಬಳಸಿ ಉತ್ತಮ ವಿಶಾಲವಾದ ಪ್ರಸ್ತುತ ತಂತ್ರಜ್ಞಾನ ಬಳಸಿ ಅಡುಗೆ ಮನೆ ನಿರ್ಮಿಸಿದ ಜಗತ್ತಿನ ಏಕೈಕ ಅಡುಗೆ ಮನೆ ಎಂದರೆ ತಪ್ಪಾಗಲಾರದು.
ಪವಿತ್ರತೆ!ಸತ್ಯತೆ! ಆರೋಗ್ಯ! ಹೀಗೆ ಹತ್ತು ಹಲವಾರು ಆಯುರ್ವೇದ ವೈದ್ಯ ಪದ್ಧತಿಯಲ್ಲಿ ಸಾಗುವ ಇಲ್ಲಿಯ ಸಸ್ಯಾಹಾರ ಪದ್ದತಿಯ ಅಡುಗೆ ಮನೆ ಹೊಕ್ಕಿದರೆ ನಮಗಾಗುವ ಆನಂದಕ್ಕೆ ಪಾರವೇ ಇಲ್ಲ…….
ಕೆಲವೇ ಸಮಯದೊಳಗೆ ಲಕ್ಷಾಂತರ ಜನರಿಗೆ ಅಡುಗೆ ಮಾಡಬಹುದಾದ ಆಧುನಿಕ ತಂತ್ರಜ್ಞಾನ ಬಳಸಿ ಅಡುಗೆ ಮನೆ ನಿರ್ಮಿಸಿದ ಕೀರ್ತಿ ಪ್ರಜಾ ಪಿತ ಬ್ರಹ್ಮ ಕುಮಾರೀಸ್ ನ ಮುಖ್ಯ ಕಚೇರಿ ಗೆ ಸಲ್ಲುತ್ತದೆ.
ಬೆಳಿಗ್ಗೆ ನಾಲ್ಕರಿಂದ ಟೀ,ಕಾಫಿ ಮತ್ತು ಹಾಲಿನೊಂದಿಗೆ ಅಡುಗೆ ಕೆಲಸ ಪ್ರಾರಂಭ* ಗೊಂಡರೆ ರಾತ್ರಿ ಹತ್ತಕ್ಕೆ ಒಂದು ಲೋಟ ಉತ್ತಮ ಹಾಲಿನೊಂದಿಗೆ ಅಡುಗೆ ಕೆಲಸ ಕೊನೆ ಗೊಳ್ಳುತ್ತದೆ.
ಬೆಳಿಗ್ಗೆ ಯ ತಿಂಡಿ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಜನರಿಗೆ ಹೊಂದುವಂತೆ ತಯಾರಿಸಲಾಗುತ್ತದೆ.ತಿಂಡಿ ತಿಂದು ಮುಗಿಯುವುದರೊಳಗೆ ಮಧ್ಯಾಹ್ನದ ಘಮ ಘಮ ಪರಿಮಳ ಯುಕ್ತ ಕ್ಯಾಮಿ ಕಲ್ ರಹಿತ ಅಡುಗೆ ತಯಾರಾಗಿ ಇರುತ್ತದೆ.ಅದು ಮುಗಿಯುವುದರೊಳಗೆ ಮಧ್ಯಾಹ್ನದ ಕಾಫಿ ಟೀ ತಯಾರಾಗಿರುತ್ತದೆ.
ಅದು ಮುಗಿಯುವುದರೊಳಗೆ ರಾತ್ರಿ ಭೋಜನ ವ್ಯವಸ್ಥೆ ತಯಾರಾಗಿರುತ್ತದೆ.ಇಂದು ಭೋಜನಕ್ಕಾಗಿ ಜನರು ಎಲ್ಲೆಂದರಲ್ಲಿ *ಅಲೆದಾಡುತ್ತಿರುವ ಈ ಸಂದರ್ಭದಲ್ಲಿ ಇಲ್ಲಿನ ಅಡುಗೆ ತಯಾರಿ ಕ್ರಮವೇ ವಿಚಿತ್ರ ವಿಸ್ಮಯ ವಿಶಿಷ್ಟ!*
ಮದ್ಯಪಾನ ಧೂಮಪಾನ ತಂಬಾಕು ರಹಿತ ಅಡುಗೆ ಕಾರ್ಯ!
ಇಡೀ ಜಗತ್ತಿಗೆ ಮಾದರಿ ಯಾದ ಅಡುಗೆ ಮನೆ……..!
ನಿಯಮ!ನಿಷ್ಠತೆ!ಬದ್ಧತೆ!
ಅಧ್ಯಾತ್ಮ!ಆಹಾರ! ಶಿಕ್ಷಣ!
ಮೂರೂ ಒಂದೇ ರೀತಿಯಲ್ಲಿ ನಡೆದರೆ ಮಾತ್ರ ಪರಿಪೂರ್ಣ ಚಿಂತನೆ ಎಂಬಾ ವಿಶೇಷ ಸಂದೇಶದ ಉತ್ತಮ ಗುಣಮಟ್ಟದ ಅಡುಗೆ ಮನೆ.!
ಇವುಗಳ ಸಂದರ್ಶನವೇ ಇದಕ್ಕೆ ಉತ್ತರ……..
ಹಾಗಾಗಿ ಇಂದು ನಾಲ್ಕನೇ ದಿನ ದ ಉತ್ತಮ ಗುಣಮಟ್ಟದ ಊಟ ಸವಿದು! ಸುಖದ ಯೋಗಾ ಭ್ಯಾಸ ದೊಂದಿಗೆ ಸಮಯ ಸಾಗುತ್ತಿದೆ…..
(ಮುಂದುವರಿಯುತ್ತದೆ)
ಎಸ್ ಸತೀಶ್ ಕುಮಾರ್ ಕೋಟೇಶ್ವರ ಸಂಪಾದಕರು ಅಧ್ಯಾತ್ಮ ರಹಸ್ಯ ಮಾಸಪತ್ರಿಕೆ ಕೋಟೇಶ್ವರ
ಅಧ್ಯಕ್ಷರು ಕುಂದಾಪುರ ತಾಲೂಕು ಪತ್ರಕರ್ತರ ಸಂಘ (ರಿ.) ಕುಂದಾಪುರ* .
9964183229/9620472014
Join The Telegram | Join The WhatsApp |