ಅಥಣಿ : ತಾಲೂಕಿನ ಕೊಡಗಾನೂರ ಗ್ರಾಮದ ಕೃಷಿಭೂಮಿಯಲ್ಲಿ ಭಾನುವಾರ ತಾಯಿ-ಮಗನ ಶವ ಪತ್ತೆಯಾಗಿದೆ.

ಚಂದ್ರವ್ವ ಅಪ್ಪಾರಾಯ ಇಚೇರಿ(62), ಅವರ ಪುತ್ರ ವಿಠಲ ಅಪ್ಪಾರಾಯ ಇಚೇರಿ(43) ಮೃತರು. ಕಟ್ಟಿಗೆ ಮತ್ತಿತರ ವಸ್ತುಗಳಿಂದ ಗಂಭೀರವಾಗಿ ಹಲ್ಲೆ ಮಾಡಿ, ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಹೊಲದಲ್ಲಿ ಇಬ್ಬರ ಮೃತದೇಹ ಸಿಕ್ಕಿವೆ. ಆದರೆ, ಘಟನೆಗೆ ನಿಖರವಾದ ಕಾರಣ ಮತ್ತು ಸುಳಿವು ಇನ್ನೂ ಸಿಕ್ಕಿಲ್ಲ. ಎಲ್ಲ ಆಯಾಮಗಳಲ್ಲಿ ತನಿಖೆ ಮಾಡಲಾಗುವುದು ಎಂದು ಘಟನಾ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ತಿಳಿಸಿದರು.

ಶ್ವಾನದಳವನ್ನೂ ಹೊಲಕ್ಕೆ ಕರೆಯಿಸಿ ಪರಿಶೀಲಿಸಲಾಯಿತು. ಐಗಳಿ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.