ಬಂಟ್ವಾಳ : ಬಂಟ್ವಾಳ ತಾಲೂಕು ವೀರಕಂಬ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಜಿ ಇಲ್ಲಿನ ಮತದಾನ ಕೇಂದ್ರದಲ್ಲಿ ವಿನುತಾ ಎಂಬ ನವವಧು ಮತದಾನ ಮಾಡಿದ್ದಾರೆ. ಬಂಟ್ವಾಳ ತಾಲೂಕು ವೀರಕಂಬ ಗ್ರಾಮದ ಗಣೇಶ ನಿಲಯದ ಕಮಲಾಕ್ಷ ಪೂಜಾರಿ ಅವರ ದ್ವಿತೀಯ ಪುತ್ರಿ ವಿನುತಾ ತನ್ನ ವಿವಾಹ ಮುಹೂರ್ತಕ್ಕೆ ಮೊದಲು ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿ ಗಮನ ಸೆಳೆದರು.