ಮಾಗಡಿ :
ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಂದಿನ ಮುಖ್ಯಮಂತ್ರಿ ಪರಮೇಶ್ವರ್ ಎಂಬ ಕೂಗು ಕೇಳಿಬಂತು.
ಆಗ ಅಲ್ಲೇ ಇದ್ದ ಪರಮೇಶ್ವರ್ ಅವರು ತಕ್ಷಣ ಘೋಷಣೆ ಕೂಗುತ್ತಿದ್ದವರ ಕೈಯಿಂದ ಮೈಕ್ ಕಿತ್ತುಕೊಂಡ ಪ್ರಸಂಗವೂ ನಡೆಯಿತು. ಅಂಬೇಡ್ಕರ್ ಹಬ್ಬ ಹಾಗೂ ಅಂಬೇಡ್ಕರ್ ಪುತ್ಥಳಿ ಅನಾವರಣಕ್ಕೆ ಮಾಗಡಿಗೆ ಶುಕ್ರವಾರ ಆಗಮಿಸಿದ್ದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರಿಗೆ ಮಾಗಡಿಯಲ್ಲಿ ಅದ್ದೂರಿ ಸ್ವಾಗತ ನೀಡಲಾಯಿತು.
ಜೆಸಿಬಿ ಮೂಲಕ ಬೃಹತ್ ಸೇಬಿನ ಹಾರ ಹಾಕಿ, ಹೂ ಚೆಲ್ಲಿ ಬರಮಾಡಿಕೊಳ್ಳಲಾಯಿತು. ಈ ವೇಳೆ ಗೃಹ ಸಚಿವರನ್ನು ಮೆರವಣಿಗೆ ನಡೆಸಲಾಗಿದ್ದು, ಆಗ ಮುಂದಿನ ಮುಖ್ಯಮಂತ್ರಿ ಪರಮೇಶ್ವರ್ ಎಂಬ ಘೋಷಣೆ ಕೇಳಿಬಂತು. ಇದನ್ನು ಕೇಳುತ್ತಲೇ ಮೆರವಣಿಗೆ ವಾಹನದಲ್ಲಿದ್ದ ಪರಮೇಶ್ವರ್ ಪಕ್ಕದಲ್ಲಿದ್ದ ವ್ಯಕ್ತಿಯಿಂದ ಮೈಕ್ ಕಿತ್ತುಕೊಂಡರು. ಆದರೂ ಪರಮೇಶ್ವರ್ ಮುಂದಿನ ಸಿಎಂ ಎಂಬ ಕೂಗು ಮತ್ತೆ ಮತ್ತೆ ಕೇಳಿಸಿತು.