Join The Telegram | Join The WhatsApp |
ಗದಗ :
ವ್ಯಕ್ತಿಯ ಗೌರವ ಮತ್ತು ಅಸ್ತಿತ್ವಕ್ಕೆ ಮಾನವ ಹಕ್ಕುಗಳು ಅತ್ಯಗತ್ಯವಾದವು. ಅವುಗಳ ಪರಿಪಾಲನೆ ಕೂಡ ಅಷ್ಟೇ ಬಹುಮುಖ್ಯವೆಂದು ದಾವಣಗೆರೆ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಶ್ರೀಧರ ಬಾರ್ಕಿ ಅಭಿಪ್ರಾಯಪಟ್ಟರು.
ಕೆ.ಎಲ್ ಇ ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ನೆಹರು ಯುವಕೇಂದ್ರ ಗದಗ ಮತ್ತು ನೇತಾಜಿ ಯುವಕ ಮಂಡಳ ಹಾಗೂ ಯುಥ್ಸ್ ಪಾರ್ ಚೇಂಜ್ಸ್ ಅರ್ಗನೈಜೇಶನ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಮಾನವ ಹಕ್ಕುಗಳ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.
ಮಾನವ ಹಕ್ಕುಗಳನ್ನು ಅರ್ಥೈಸುವಲ್ಲಿ ಇರುವ ಸಾಂಸ್ಕೃತಿಕ ಮಿತಿಯ ಕುರಿತು ಮಾತನಾಡುತ್ತ ಇಂದು ಎಲ್ಲ ರಾಷ್ಟ್ರಗಳಲ್ಲಿ ಮಾನವ ಹಕ್ಕುಗಳ ರಕ್ಷಣೆಗೆ ಸಂವಿಧಾನ ಬದ್ದ ಕಾನೂನುಗಳು ರಚನೆಯಾಗಿವೆ. ಆದರೆ ಮಾನವಹಕ್ಕುಗಳು ಎಷ್ಟರ ಮಟ್ಟಿಗೆ ನಮಗೆ ಅರ್ಥವಾಗುತ್ತವೆ ಎಂದು ಪ್ರಶ್ನಿಸಿಕೊಳ್ಳುವುದು ಪ್ರಮುಖವೆನಿಸುತ್ತವೆ. ಮಾನವ ಹಕ್ಕುಗಳ ಉಗಮ ಪಾಶ್ಚಾತ್ಯ ಸಂಸ್ಕ್ರತಿಯ ಕ್ರಿಶ್ಚಿಯನ್ ಥಿಯಾಲಜಿಯ ಚೌಕಟ್ಟಿನಲ್ಲಿ ಉಗಮವಾಗಿದ್ದು ಭಾರತದಂತಹ ರಾಷ್ಟ್ರಗಳಲ್ಲಿ ಇಂತಹ ಹಕ್ಕುಗಳ ಉಲ್ಲಂಘನೆ ಅಪಾಯಕಾರಿಯಾದದ್ದೆಂದು ಕಳವಳ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಎಫ್.ಪಿ. ಲಕ್ಷ್ಮೇಶ್ವರಮಠ, ಮಾನವ ಹಕ್ಕುಗಳ ರಕ್ಷಣೆಗಿರುವ ಕಾನೂನಾತ್ಮಕ ಪರಿಹಾರ ಸೂಚಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಪ್ರಾಚಾರ್ಯ ಎಂ.ಬಿ.ಕೊಳವಿ ವಹಿಸಿದ್ದರು. ಕಾರ್ಯಕ್ರಮದ ಕುರಿತು ಐ.ಕ್ಯೂ.ಎ.ಸಿ. ಸಂಯೋಜಕಿ ಡಾ. ವೀಣಾ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರೊ. ವೀಣಾ ತಿರ್ಲಾಪುರ ಕಾರ್ಯಕ್ರಮ ನಿರೂಪಿಸಿದರು. ಡಾ. ವಿಠ್ಠಲ ಕೋಳಿ ವಂದಿಸಿದರು. ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ರಂಜನಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಎಲ್ಲ ಭೋದಕ ಮತ್ತು ಭೋದಕೇತರ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು. ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸುಮಾರು ಮೂವತೈದು ಅಧ್ಯಾಪಕರು ಪತ್ರಿಕೆ ಮಂಡಿಸಿದರು.
Join The Telegram | Join The WhatsApp |