This is the title of the web page
This is the title of the web page

Live Stream

June 2023
S M T W T F S
 123
45678910
11121314151617
18192021222324
252627282930  

| Latest Version 9.4.1 |

Feature Article

ಸರ್ಕಾರಿ ನೌಕರರ ಮಕ್ಕಳನ್ನು ‘ಸರ್ಕಾರಿ ಶಾಲೆಗಳಿಗೆ’ ಸೇರಿಸುವ ನಿಯಮ ಜಾರಿಯಾಗಬೇಕು…..!

Join The Telegram Join The WhatsApp

ಸರ್ಕಾರಿ ನೌಕರರ ಅವರ ಮಕ್ಕಳನ್ನೂ ಸಹ ಸರ್ಕಾರಿ ಶಾಲೆಗೆ ಸೇರಿಸಬೇಕು ಎನ್ನುವ ಕಟ್ಟುನಿಟ್ಟಿನ ನಿಯಮ ಜಾರಿಯಾಗಬೇಕು ಎಂಬುದು ನಾಡಿನ ಅನೇಕರ ಅಭಿಮತವಾಗಿದೆ.

ಸರ್ಕಾರಿ ಕೆಲಸ ದೇವರ ಕೆಲಸ ಎನ್ನುವ ತಾತ್ವಿಕ ಪಾಲನೆಯನ್ನು ಎಲ್ಲರೂ ಅನುಸರಿಸಬೇಕು. ಸಮಾನ ಶಿಕ್ಷಣ ವ್ಯವಸ್ಥೆ ಕೂಡ ನೀತಿ ಬದ್ಧವಾಗಿ ಅನುಷ್ಟಾನಗೊಳ್ಳಬೇಕು.ಕೇವಲ ದಾಖಲೆಯಲ್ಲಿ ಮಾತ್ರ ಉಳಿಯದೇ ಕೃತಿಯಲ್ಲಿ ಪಾಲನೆಯಾಗಬೇಕು.

ಇಂತಹ ಅಧಿಕೃತ ನಿಯಮಗಳನ್ನು ಪ್ರತಿಯೊಬ್ಬರು ಪಾಲಿಸುವುದು ಕೂಡ ತುಂಬಾ ವಿರಳವೇನೋ ಅನಿಸುವುದು ಗುಟ್ಟಾಗೇನು ಉಳಿದಲ್ಲ ಬಿಡಿ..! ಅದೇನೇ ಇರಲಿ ಎಲ್ಲ ಸೌಲಭ್ಯ ಹೊಂದಿರುವ ಸರ್ಕಾರಿ ನೌಕರರು ಪ್ರತಿ ಸಲವೂ ವೇತನ ಹೆಚ್ಚಳಕ್ಕೆ ಆದೇಶ ಜಾರಿಯಾಗುತ್ತಲೇ ಇರುವದು ಸಾಮಾನ್ಯ ಸಂಗತಿ. ಸರ್ಕಾರದ ಎಲ್ಲ ಸೌಲಭ್ಯಗಳನ್ನು ನಿರೀಕ್ಷಿಸುವ ಜನರು ಮಾತ್ರ ಆಶಾವಾದಿಗಳಾಗಿಯೇ ಇದ್ದಾರೆ, ಇರುತ್ತಾರೆ. ಕೂಲಿ ಕಾರ್ಮಿಕರಿಗೆ ಸರಿಯಾದ ದುಡಿಮೆಗೆ ತಕ್ಕ ಕೂಲಿ ಸಿಗದಿರುವದು ಇಂದೆಲ್ಲಾ ನಾವು ಕಾಣುತ್ತಿದ್ದೇವೆ. ಇಂದು ರೈತರು ಬೆಳೆದಂತಹ ಬೆಳೆಗಳಿಗೆ ಸರಿಯಾದ ಬೆಲೆ ದೊರಕಿಸದಿರುವದು ಒಂದು ಬಗೆಯಾದರೆ.., ಬಡವರ ನೋವಿಗೆ ಸ್ಪಂದಿಸದ ಸರ್ಕಾರಗಳು ಮಾತ್ರ ಎಲ್ಲಾ ಸವಲತ್ತುಗಳನ್ನು ಹೊಂದಿರುವ ನೌಕರಿಗೆ ಇನ್ನೂ ದುಪ್ಪಟ್ಟು ವೇತನ ಹೆಚ್ಚಳ ಮಾಡಿದರೆ ಹೇಗೆ..? ಅದೂ ಸಾಲದೆ ಎಂಬಂತೆ ಸಂಬಳದ ಜೊತೆಗೆ ಗಿಂಬಳವೂ ದೂರೆಯುತ್ತದೆ ಎಂಬುದನ್ನು ದಿನ ನಿತ್ಯ ಮಾಧ್ಯಮದಲ್ಲಿ ನೋಡುತ್ತಿದ್ದೇವೆ. ಅದೆಷ್ಟೂ ಮಂದಿ ಸರಿಯಾಗಿ ಕೆಲಸಕ್ಕೆ ಬರದಿದ್ದರೂ ಸಂಬಳ ಮಾತ್ರ ಅವರ ಖಾತೆಗೆ ಹೋಗುತ್ತದೆ ಎಂಬ ಗುಮಾನಿ ಸುಳ್ಳಲ್ಲ. ಸೀಮಿತ ಉದಾಹರಣೆಯಲ್ಲಿ ಹೇಳಬೇಕೆಂದರೆ..?! ಮೊನ್ನೆ ನಾನು ಒಂದು ಬ್ಯಾಂಕ್ಗೆ ಹೋಗಿದ್ದೆ ಅಲ್ಲಿನ ಅವ್ಯವಸ್ಥೆಯನ್ನು ಕಂಡು ನಿಜಕ್ಕೂ ಬೇಸರವಾಯಿತು. ಅಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಉದ್ಯೋಗಿ ಅದು ಪ್ರತಿಷ್ಥಿತ ಸರ್ಕಾರಿ ಬ್ಯಾಂಕ್ನಲ್ಲಿ ಕೆಲವು ಕೆಲಸಗಳನ್ನು ಹೆಚ್ಚುವರಿಯಾಗಿ ಮಾಡುವುದು, ಕೆಲವು ಅನಿಯಮಿತ ರಜೆಗಳನ್ನು ತೆಗೆದುಕೊಳ್ಳುವುದು, ಸುಮಾರು ೫ ಜನ ಮಾತ್ರ ಇನ್ನೂ ಸಹಾಯಕರು ಸೇರಿ ೪ ಜನ ಮಾತ್ರ ಖಾಸಗಿ ನಿಮಿತ್ತ ತಮ್ಮ ರಜೆಗಳನ್ನು ತೆಗೆದುಕೊಂಡಿದ್ದಾರೆ. ಆ ರಜೆ ಹೇಗೆಂದರೆ ಪ್ರತಿಯೊಬ್ಬರದು ಸರಿಯಾಗಿ ಕೆಲಸ ಮಾಡದೆ ಅಲ್ಲಿನ ಒಬ್ಬ ವ್ಯಕ್ತಿ ಮಾತ್ರ ಬ್ಯಾಂಕ್ಗೆ ಬರುವ ಗ್ರಾಹಕರಿಗೆ ದಿನ ನಿತ್ಯದ ವ್ಯವಹಾರವನ್ನು ಮಾಡುತ್ತಾರೆ.ಇನ್ನೂ ಕೆಲವೊಮ್ಮೆ ಹೆಚ್ಚಿನ ಸಮಯ ಕಾಯಿಸುವುದು ಸಹ ಅವರ ಪರಿಪಾಠವಾಗಿದೆ. ಇದು ಎಲ್ಲಡೆ ಸಹಜವಾಗಿದೆ ಬಿಡಿ ಎನ್ನುವಷ್ಟು ಧೋತಕ.ದಿನ ಸಾಯುವರರಿಗೆ ಇಲ್ಲಿ ಆಳುವರು ಯಾರು..? ಎಂಬ ಜನ ಜಾಹಿರವಾದ ಮಾತು ಅನ್ವಯಿಸಬಹುದು. ಅದೆನೇ ಇರಲಿ. ಎಲ್ಲ ಸೌಲಭ್ಯ ಹೊಂದಿರುವ ನೌಕರರಿಗೆ ಸರ್ಕಾರವು ಕೆಲವೊಮ್ಮೆ ಬೇಜಾಬ್ದಾರಿಯಾಗಿ ಕೆಲಸವನ್ನು ಸಹ ನಿರ್ವಹಿಸುತ್ತದೆ ಎಂಬುದು ಹಲ್ಲೆಗಳೆಯುವಂತಿಲ್ಲ.

ವಸತಿ, ಮನೆಗಳಿಂದ ಹಿಡಿದು ಎಲ್ಲಾ ಅನುಕೂಲ ಹೊಂದಿರುವ ನೌಕರರು ಯಾವುದೇ ಭೀತಿಯಿಲ್ಲದೆ ಜೀವನವನ್ನು ಸಾಗಿಸಬಹುದು ಎನ್ನುವ ಪಕ್ಕಾಲೆಕ್ಕಾ..! ಇನ್ನೂ ಇತ್ತೀಚಿನ ಸರ್ಕಾರವು ಏಳನೇ ವೇತನ ಆಯೋಗದ ಜಾರಿ ಪ್ರಕಾರ ನೂತನ ಪಿಂಚಣಿ ಪದ್ಧತಿ(ಎನ್ಪಿಎಸ್) ರದ್ದು ಮಾಡಬೇಕು ಎಂದು ಒತ್ತಾಯಿಸಿ ರಾಜ್ಯದ ಸರ್ಕಾರಿ ನೌಕರರ ಬೇಡಿಕೆ ಕೊನೆಗೂ ಶೇ.೧೭ರಷ್ಟು ವೇತನ ಹೆಚ್ಚಳಕ್ಕೆ ಸರಕಾರ ಮಣಿದು ಒಪ್ಪಿಗೆ ಸೂಚಿಸಿದೆ. ಏಪ್ರಿಲ್ ೧ ರಿಂದು ೨೦೨೩ ರಿಂದಲೇ ಈ ಆದೇಶವು ಜಾರಿಯಾಗುತ್ತದೆ. ಮನುಷ್ಯನ ಆಸೆ, ಆಶಯ, ಆಕಾಂಕ್ಷೆಗಳು ಹೆಚ್ಚಾದಾಗ ಮಾತ್ರವೇ ಅವರ ಬೇಡಿಕೆಗಳು ಕೂಡ ಹೆಚ್ಚಾಗುವುದು ಸಹಜ. ಹಾಗಿದ್ದ ಮೇಲೆ ಸರ್ಕಾರ ಮಾತ್ರ ಕನ್ನಡ ಮಾಧ್ಯಮದ ಶಾಲೆಗಳನ್ನು ಮುಚ್ಚುವ ಸರ್ಕಾರಿ ನೌಕರರ ಮಕ್ಕಳು, ಸರ್ಕಾರಿ ಶಾಲೆಗಳಲ್ಲಿಯೇ ಓದಬೇಕೆಂಬ ಮಾತ್ರ ನಿಯಮ ಜಾರಿ ಮಾಡಲು ಬೇಜಾವಬ್ಧಾರಿಯಾಗಿ ವರ್ತಿಸುವುದು ಯಾಕೆ..?? ಸರ್ವರಿಗೂ ಸಮ ಬಾಳು.., ಸಮ ಪಾಲು.., ಇಂತಹ ಕಟ್ಟುನಿಟ್ಟಿನ ಆದೇಶ ಹೊರ ಬೀಳಬೇಕು. ಸಿರಿವಂತರ ಮಕ್ಕಳು ಪ್ರತಿಷ್ಥಿತ ಶಾಲೆಗಳಲ್ಲಿ ಲಕ್ಷ ಲಕ್ಷ ಕೊಟ್ಟು ಸುರಿದು ಸೇರಿಸುವ ಇವರು, ಅದೇ ತಮ್ಮ ಹಳ್ಳಿಗಳಲ್ಲಿ ಇರುವ ಸರ್ಕಾರಿ ಶಾಲೆಗಳ ಹತ್ತಿರವೂ ಸಹ ಸುಳಿಯುವುದಿಲ್ಲ.ಇದನ್ನು ಪ್ರಶ್ನಿಸುವ ಗೋಜಿಗೆ ಹೋಗದ ಜನಸಾಮಾನ್ಯರು..! ನಮಗೇಕೆ ಬೇಕು ಎಂದು ಹೇಳುವ ಉಡಾಫೆ ಉತ್ತರಗಳೇ ಸಾಕಾಲ್ಲವೇ..? ಖಾಸಗಿ ಶಾಲೆಗಳಿಗೆ ತೆರೆಯಲು ಅನುಮತಿ ಕೊಡುವ ಸರ್ಕಾರ, ಕನ್ನಡ ಶಾಲೆಗಳನ್ನು ಉಳಿಸುವ ಗೋಜಿಗೆ ಹೋಗುವುದಿಲ್ಲ. ಸರಿಯಾದ ಸಮಯಕ್ಕೆ ಕೆಲಸಕ್ಕೆ ಬಾರದಿರುವುದು ಶಿಕ್ಷಕ ವೃತ್ತಿಯಲ್ಲಿರುವ ಅದೆಷ್ಷೂ ಮಂದಿ ತಮ್ಮ ಮಕ್ಕಳನ್ನೇ ಖಾಸಗಿ ಶಾಲೆಗಳಿಗೆ ಸೇರಿಸುವ ವಿಶೇಷ ಬಗೆಯಾದರೆ, ಒಂದು ರೀತಿಯಾಗಿ ಇದು ನಿಜಕ್ಕೂ ದುರಂತವೇ ಸರಿ. ಎಲ್ಲಿಯವರಿಗೂ ಸರ್ಕಾರಿ ನೌಕರರು ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸುವ ಕಾನೂನು ಜಾರಿಯಾಗುವುದಿಲ್ಲವೂ.., ಅಲ್ಲಿಯವರೆಗೂ ಕನ್ನಡದ ಶಾಲೆಗಳನ್ನು ಅಭಿವೃದ್ದಿಗೊಳಿಸಲು ಸಾಧ್ಯವಿಲ್ಲ. ಪಕ್ಕದ ರಾಜ್ಯಗಳಾದ ಕೇರಳ, ತಮಿಳುನಾಡು ಸರ್ಕಾರವು ತಮ್ಮ ಭಾಷೆಗಳಿಗೆ ಹೆಚ್ಚಿನ ಆದ್ಯೆತೆಯ ಜೊತೆಗೆ ಅನೇಕ ಮಹತ್ವ ನೀಡಲಾಗುತ್ತಿವೆ. ಸರ್ಕಾರಿ ಶಾಲೆಗಳನ್ನು ಯಾವ ಖಾಸಗಿ ಶಾಲೆಗಳಿಗೂ ಕಡಿಮೆ ಇಲ್ಲದಂತೆ ಸೆಡ್ಡು ಹೊಡೆದಿರುವದು ಆಯಾ ರಾಜ್ಯಗಳ ಪರಿಸ್ಕೃತ ವರದಿಯಿಂದ ತಿಳಿಯಬಹುದಾಗಿದೆ. ಸರ್ಕಾರಿ ಕೆಲಸ ಸೇರಬೇಕಾದರೆ ಈ ಕಾನೂನು ಮೊದಲೆ ತವರಲ್ಲಿ ಷರತ್ತು ಬದ್ಧವಾಗಿ ಅನ್ವಯವಾಗುವಂತೆ ಕಡ್ಡಾಯ ಮಾಡಬೇಕು.ನಮ್ಮದೇ ಆದ ಕನ್ನಡದ ಭಾಷೆಯಲ್ಲಿ ಉತ್ತೀರ್ಣರಾಗಿರಬೇಕು, ಇಲ್ಲವೇ ಕನ್ನಡ ಶಾಲೆಗಳನ್ನು ಉಳಿಸುವ ಯತ್ನ, ಪ್ರಯತ್ನಗಳು ನಡೆಯಲಿ. ಪ್ರತಿಯೊಬ್ಬ ಕನ್ನಡಿಗರು ಇಂತಹ ಕಾನೂನು ಜಾರಿಯಾಗುವ ನಿಯಮಕ್ಕೆ ಹೋರಾಟ ಮಾಡಿದಾಗ ಮಾತ್ರ ನಮ್ಮ ನಾಡು, ನುಡಿ ಉಳಿಯಲು ಸಾಧುವಾಗುತ್ತದೆ.

ಜ್ಯೋತಿ ಜಿ, ಮೈಸೂರು.

(ಉಪನ್ಯಾಸಕರು, ಸಮಾಜ ಚಿಂತಕರು.)


Join The Telegram Join The WhatsApp
Admin
the authorAdmin

Leave a Reply