ಬೆಳಗಾವಿ: ರಾಜ್ಯದ ಪ್ರಭಾವಿ ಸಚಿವರಲ್ಲಿ ಒಬ್ಬರಾಗಿರುವ ಸತೀಶ ಜಾರಕಿಹೊಳಿ ಅವರಲ್ಲಿ ಮುಖ್ಯಮಂತ್ರಿ ಹುದ್ದೆಯನ್ನು ನಿಭಾಯಿಸುವ ಶಕ್ತಿ ಇದೆ ಎಂದು ಅವರ ಆಪ್ತರೆಂದೇ ಗುರುತಿಸಲ್ಪಟ್ಟಿರುವ ಸವದತ್ತಿಯ ಕಾಂಗ್ರೆಸ್ ಶಾಸಕ ವಿಶ್ವಾಸ ವೈದ್ಯ ಹೇಳಿದ್ದಾರೆ. ಪತ್ರಕರ್ತರ ಜೊತೆ ಮಾತನಾಡಿದ ಅವರು, ಸತೀಶ ಜಾರಕಿಹೊಳಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದರೆ ಆ ಸ್ಥಾನವನ್ನು ನಿಭಾಯಿಸುವಷ್ಟು ಅವರು ಶಕ್ತಿಯುತವಾಗಿದ್ದಾರೆ. ಅವರು ಸಮಗ್ರ ಉತ್ತರ ಕರ್ನಾಟಕವನ್ನು ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿ ಮಾಡಲಿದ್ದಾರೆ. ಅವರಲ್ಲಿ ಅಂತಹ ದೊಡ್ಡ ಶಕ್ತಿ ಇದೆ ಎಂದು ವಿಶ್ವಾಸ ವೈದ್ಯ ಹೇಳಿದ್ದಾರೆ.

ಬೆಳಗಾವಿ ಜಿಲ್ಲೆಯವರೇ ಆಗಿರುವ ಸತೀಶ ಜಾರಕಿಹೊಳಿ ಅವರು ಮುಖ್ಯಮಂತ್ರಿ ಆದರೆ ಸಂತೋಷ ಪಡುವುದಾಗಿ ಈಗಾಗಲೇ ಬಿಜೆಪಿ ಶಾಸಕರಾದ ದುರ್ಯೋಧನ ಐಹೊಳೆ ಮತ್ತು ವಿಠಲ ಹಲಗೇಕರ ಹೇಳಿದ್ದಾರೆ. ಇದರ ಬೆನ್ನಿಗೆ ಇದೀಗ ಸತೀಶ ಜಾರಕಿಹೊಳಿಯವರ ಅತ್ಯಂತ ಅಪ್ತರೆಂದು ಗುರುತಿಸಿಕೊಂಡಿರುವ ವಿಶ್ವಾಸ ವೈದ್ಯ ಅವರು ನೀಡಿರುವ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಮತ್ತಷ್ಟು ಸಂಚಲನಕ್ಕೆ ಕಾರಣವಾಗಿದೆ.