Join The Telegram | Join The WhatsApp |
ಬೆಳಗಾವಿ :
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಅಂತರ ಮಹಾವಿದ್ಯಾಲಯಗಳ ಭಾರ ಎತ್ತುವ ಸ್ಪರ್ಧೆಯನ್ನು ಮಹಿಳೆ ಮತ್ತು ಪುರುಷರಿಗೆ ಹಾಗೂ ಪುರುಷರಿಗೆ ದೇಹದಾರ್ಢ್ಯ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಸದರಿ ದಿನ ಎರಡೂ ಸ್ಪರ್ಧೆಯ ಆಯ್ಕೆ ಪ್ರಕ್ರಿಯೆಗಳು ನಡೆಯಲಿವೆ. ಇವೆಲ್ಲವೂ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ನೇತೃತ್ವದಲ್ಲಿ ಡಿಸೆಂಬರ್ 31 ರಂದು ಆಯೋಜಿಸಲಾಗಿದೆ. ಭಾಗವಹಿಸುವ ಎಲ್ಲಾ ಮಹಾವಿದ್ಯಾಲಯಗಳ ಕ್ರೀಡಾಪಟುಗಳು ಅಂದು ಬೆಳಗ್ಗೆ 10:30 ಗಂಟೆಗೆ ಜಿಲ್ಲಾ ಕ್ರೀಡಾಂಗಣ, ಬೆಳಗಾವಿಯಲ್ಲಿ ಹಾಜರಿರಬೇಕು. ಮಾಹಿತಿಗೆ ಯಲ್ಲಪ್ಪ ಭರಮಣ್ಣವರ ಮೊಬೈಲ್ ಸಂಖ್ಯೆ : 8088992005 ಇಲ್ಲಿಗೆ ಸಂಪರ್ಕಿಸುವಂತೆ ಕೋರಲಾಗಿದೆ.
Join The Telegram | Join The WhatsApp |