ಗೋಕಾಕ: ಗಡಿಕಾಯುವ ಸೈನಿಕ, ಅನ್ನ ನೀಡುವ ರೈತ ಈ ಇಬ್ಬರು ದೇಶದ ಎರಡು ಕಣ್ಣುಗಳಿದಂತೆ ಹೀಗಾಗಿ ದೇಶದ ಮಾಜಿ ಪ್ರಧಾನಿ ಲಾಲಬಹದ್ದೂರ ಶಾಸ್ತ್ರೀ ಅವರು ಜೈ ಜವಾನ ಜೈ ಕಿಸಾನ ಎಂಬ ಘೋಷವಾಕ್ಯ ಮೊಳಗಿಸಿದ್ದರು. ಅದಕ್ಕೆ ಪೂರಕ ಎಂಬಂತೆ ವಿಶ್ವ ಮಾನ್ಯ ನರೇಂದ್ರ ಮೋದಿ ಅವರು ಜೈ ವಿಜ್ಞಾನ ಎಂದು ಹೇಳುವ ಮೂಲಕ ಈ ದೇಶಕ್ಕೆ ಮೂರನೇ ಕಣ್ಣು ಇದೆ ಎಂದು ತೋರಿಸಿಕೊಟ್ಟಿದ್ದಾರೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ಹೇಳಿದರು.
ಗುರುವಾರ ಅ.3 ರಂದು ತಾಲೂಕಿನ ಮರಡಿ ಶಿವಾಪೂರ ಗ್ರಾಮದ ಸುಭೇದಾರ ಶ್ರೀ ಸಂತೋಷ ಮನೋಹರ ಕೊಣ್ಣೂರ ಅವರ ಸೇನಾ ನಿವೃತ್ತಿಯ ಅಭಿನಂದನಾ ಸಮಾರಂಭದಲ್ಲಿ ಅವರನ್ನು ಸತ್ಕರಿಸಿ, ಸಂಸದ ಈರಣ್ಣ ಕಡಾಡಿ ಅವರು ಮಾತನಾಡಿದರು.
ಭಾರತೀಯ ಸೇನೆಯಲ್ಲಿ ಸುಧೀರ್ಘ 24 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ಸ್ವಗ್ರಾಮಕ್ಕೆ ಆಗಮಿಸಿದ ಸುಭೇದಾರ ಶ್ರೀ ಸಂತೋಷ ಮನೋಹರ ಕೊಣ್ಣೂರ ಅವರು ಸಮಾಜದಲ್ಲಿ ತಾವು ಸೈನ್ಯದಲ್ಲಿ ಪಡೆದಿರುವ ಅನುಭವವನ್ನು ಧಾರೆ ಎರೆಯುವ ಮೂಲಕ ಗ್ರಾಮದ ಯುವಕರಿಗೆ ಸೇನೆಯಲ್ಲಿ ಸೇರಿ ಉತ್ತಮ ಜೀವನ ರೂಪಿಸಿಕೊಳ್ಳಲು ಇರುವ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಲು ಯುವಕರಿಗೆ ಮಾರ್ಗದರ್ಶನ ಮಾಡುವ ಮೂಲಕ ಅವರ ನಿವೃತ್ತಿ ಬದುಕು ಸುಂದರವಾಗಿರಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಪೂಜ್ಯ ಶ್ರೀ ಕೇಶವಾನಂದ ಮಹಾಸ್ವಾಮಿಗಳು, ಯೋಗ ಗುರು ಹಣಮಂತ ಗೂರೂಜಿ, ವೇ.ಮೂ ಗಂಗಯ್ಯ ಹಿರೇಮಠ ಸಾನಿಧ್ಯ ವಹಿಸಿದ್ದರು. ಗಜಾನನ ಮನ್ನಿಕೇರಿ, ಸೂರ್ಯಕಾಂತ ಗುದಗನವರ, ಮಹಾದೇವ ಕಡ್ಡಿ, ಕೆಂಪಣ್ಣ ಯರಗಟ್ಟಿ, ಕೆಂಪಣ್ಣ ಶೀಗೆಹಳ್ಳಿ, ಚಂದ್ರಶೇಖರ ಶಿಗೆಹಳ್ಳಿ, ಮಾಜಿ ಸೈನಿಕ ಸೂರ್ಯಕಾಂತ ಅಂಕಲಿ, ಸಿದ್ದಪ್ಪಾ ಪಾಟೀಲ ಸೇರಿದಂತೆ ಮಾಜಿ ಯೋಧರು, ಗ್ರಾಮದ ಪ್ರಮುಖರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.