ಬೆಳಗಾವಿ: 2024ನೇ ಸಾಲಿನ ಕಿತ್ತೂರು ವಿಜಯೋತ್ಸವ ಸಂಭ್ರಮದಿಂದ ಆಚರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಬೆಂಗಳೂರಿನ ವಿಕಾಸ ಸೌಧದಲ್ಲಿ ಕಂದಾಯ ಸಚಿವ ಮತ್ತು ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೃಷ್ಣ ಬೈರೇಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ.

200 ನೇ ಕಿತ್ತೂರು ವಿಜಯೋತ್ಸವ ಪ್ರಯುಕ್ತ ಕಿತ್ತೂರು ಕೋಟೆ ಆವರಣದಲ್ಲಿ ಥೀಮ್ ಪಾರ್ಕ್ ನಿರ್ಮಾಣ ಮಾಡಲು 35 ಕೋಟಿ ರೂಪಾಯಿ ಮತ್ತು ಉತ್ಸವಕ್ಕೆ ಐದು ಕೋಟಿ ಸೇರಿದಂತೆ ಒಟ್ಟು 40 ಕೋಟಿ ಅನುದಾನಕ್ಕೆ ಅನುಮೋದನೆ ನೀಡಿ ಅನುದಾನವನ್ನು ಸಚಿವ ಕೃಷ್ಣ ಬೈರೇಗೌಡ ಬಿಡುಗಡೆಗೊಳಿಸಿದರು. ಕಿತ್ತೂರು ಶಾಸಕ ಬಾಬಾ ಸಾಹೇಬ್ ಪಾಟೀಲ ಅವರ ವಿಶೇಷ ಪ್ರಯತ್ನದ ಮೂಲಕ ರಾಜ್ಯ ಸರಕಾರ ಈ ಬಾರಿ ಕಿತ್ತೂರು ಉತ್ಸವವನ್ನು ಐತಿಹಾಸಿಕವನ್ನಾಗಿ ಅಚರಿಸಲು ಉತ್ಸಾಹ ತೋರಿದೆ.