ಬೆಂಗಳೂರು: ರಾಜ್ಯ ಸರಕಾರ ಇದೀಗ ಬಿಯರ್ ದರ ಹೆಚ್ಚಿಸಿ ಅಧಿಸೂಚನೆ ಹೊರಡಿಸಿದೆ.

ರಾಜ್ಯ ಸರಕಾರ ಬಿಯರ್ ಮೇಲಿನ ಸುಂಕವನ್ನು ಏರಿಕೆ ಮಾಡಿದೆ. ಈ ಬಗ್ಗೆ ಬುಧವಾರ ಅಧಿಸೂಚನೆ ಹೊರಬಿದ್ದಿದ್ದು ಜನವರಿ 20 ರಿಂದ ಬಿಯರ್ ದರ ಹೆಚ್ಚಳವಾಗಲಿದೆ. ಸುಂಕ ಪ್ರಮಾಣ ಏರಿಕೆಗೊಂಡ ಆಧಾರದ ಮೇಲೆ ಕೆಲ ಪ್ರೀಮಿಯಂ ಬಿಯರ್ ಗಳ ಚಿಲ್ಲರೆ ಮಾರಾಟ ಬೆಲೆಯಲ್ಲಿ 10 ರಿಂದ 50 ರೂಪಾಯಿವರೆಗೆ ಏರಿಕೆಯಾಗಬಹುದು ಎನ್ನಲಾಗಿದೆ. 2024ರ ಅಗಸ್ಟ್ ನಲ್ಲಿ ಬಿಯರ್ ಮೇಲಿನ ಸುಂಕ ಏರಿಕೆ ಸಂಬಂಧಪಟ್ಟು ಕರಡು ಹೊರಡಿಸಲಾಗಿತ್ತು. ಆದರೆ ಜಾರಿಗೆ ಬಂದಿರಲಿಲ್ಲ. ಈಗ ಆರ್ಥಿಕ ವರ್ಷದ ಕೊನೆಯ ತ್ರೈಮಾಸಿಕದ ಆರಂಭದಲ್ಲೇ ಇದನ್ನು ಜಾರಿಗೆ ತರಲಾಗಿದೆ.