ಬೆಂಗಳೂರು: ಡಿಜಿಟಲ್ ಮಾಧ್ಯಮದವರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದ್ದು, ಸರ್ಕಾರಿ ಜಾಹೀರಾತು ನೀಡುವ ಸಂಬಂಧ ಸರ್ಕಾರದಿಂದ ಮಾರ್ಗಸೂಚಿಯನ್ನು ಪ್ರಕಟಿಸಿದೆ. ಮುದ್ರಣ ಮಾಧ್ಯಮ, ದೃಶ್ಯ ಮಾಧ್ಯಮಗಳಿಗೆ ನೀಡುತ್ತಿದ್ದ ಸರ್ಕಾರಿ ಜಾಹೀರಾತುಗಳು ಇನ್ನು ಮುಂದೆ ಡಿಜಿಟಲ್ ಮಾಧ್ಯಮಗಳಿಗೆ ಲಭ್ಯವಾಗಲಿದೆ. ಸರ್ಕಾರ ಸೂಚಿಸಿರುವ ಮಾರ್ಗಸೂಚಿಗಳ ಮಾನದಂಡಗಳನ್ನು ಪೂರೈಸುವ ಡಿಜಿಟಲ್ ಮಾಧ್ಯಮಗಳಿಗೆ ಸರ್ಕಾರಿ ಜಾಹೀರಾತು ಲಭ್ಯವಾಗಲಿದೆ. ಸಾಂಪ್ರದಾಯಿಕ ಜಾಹೀರಾತುಗಳಿಗಿಂತ, ಡಿಜಿಟಲ್ ಜಾಹೀರಾತು ಹೆಚ್ಚು ಪ್ರಭಾವಶಾಲಿಯಾಗಿದೆ. ಸಾಂಪ್ರದಾಯಿಕ ಜಾಹೀರಾತುಗಳಿಗೆ ಹೋಲಿಸಿದರೆ ಡಿಜಿಟಲ್ ಜಾಹೀರಾತುಗಳು ಹೆಚ್ಚು ವ್ಯಾಪ್ತಿ ಮತ್ತು ನಿರ್ದಿಷ್ಟ ಜನರನ್ನು ತಲುಪಲಿದೆ. ಸರ್ಕಾರ ನೀತಿ ಮತ್ತು ಯೋಜನೆಗಳನ್ನು ಇಂಟರ್‌ನೆಟ್ ಬಳಸುವ ಜನರಿಗೆ ತಲುಪಿಸಲು ಈ ಮೂಲಕ ಸಾಧ್ಯವಾಗಲಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಡಿಜಿಟಲ್ ಜಾಹೀರಾತು ಮಾರ್ಗಸೂಚಿಯನ್ನು ತಕ್ಷಣದಿಂದ ಜಾರಿಗೊಳಿಸಲಾಗುವುದು ಎಂದು ಸರ್ಕಾರ ಆದೇಶದಲ್ಲಿ ತಿಳಿಸಿದೆ.

ಸರ್ಕಾರ ಹೊರಡಿಸಿರುವ ಮಾರ್ಗಸೂಚಿಯು ಆದೇಶದ ದಿನಾಂಕ ದಿಂದ 5 ವರ್ಷಗಳ ಅವಧಿ ಅಥವಾ ಮುಂದಿನ ಆದೇಶದವರೆಗೆ ಜಾರಿಯಲ್ಲಿರುತ್ತದೆ. ಹಲವು ಡಿಜಿಟಲ್ ಮಾಧ್ಯಮಗಳದು.

ನ್ಯಾನೋ, ಮೈಕ್ರೋ, ಮ್ಯಾಕ್ರೋ ಎಂದು ವಿಂಗಡಿಸಲಾಗಿದೆ. ನ್ಯಾನೋಗೆ 1 ಲಕ್ಷದಿಂದ 5 ಲಕ್ಷ ಫಾಲೋವರ್ ಗಳು, ಮೈಕ್ರೋಗೆ 5 ಲಕ್ಷ ದಿಂದ 10 ಲಕ್ಷ ಫಾಲೋವರ್ ಗಳು ಮತ್ತು ಮ್ಯಾಕ್ರೋಗೆ 10 ಲಕ್ಷ ಫಾಲೋವರ್‌ ಗಿಂತ ಹೆಚ್ಚು ಇರಬೇಕೆಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಡಿಜಿಟಲ್ ಜಾಹೀರಾತಿಗಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಯೋಗದೊಂದಿಗೆ ಸಮಿತಿ ಯೊಂದನ್ನು (ಎಂಪ್ಯಾನೆಲಿಂಗ್) ರಚಿಸಲಾಗುತ್ತದೆ. ಡಿಜಿಟಲ್ ಮಾಧ್ಯಮಗಳು ಕೇಂದ್ರ ಸರ್ಕಾರದ ರಿಜಿಸ್ಟ್ರಾರ್ ಆಫ್ ಕಂಪನೀಸ್‌ನಲ್ಲಿ ನೋಂದಣಿಯಾಗಿರಬೇಕು. ಸಮಿತಿಯ ಸಮಯದಲ್ಲಿ ಕನಿಷ್ಠ ಒಂದು ವರ್ಷಗಳಾಗಿರಬೇಕು. ಜಿಎಸ್‌ಟಿ ನೋಂದಣಿಯಾಗಿರಬೇಕು. ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರಬೇಕು ಅಥವಾ ರಾಜ್ಯದಲ್ಲಿ ಪೂರ್ಣ ಪ್ರಮಾಣದ ಕಚೇರಿ ಹೊಂದಿರಬೇಕು. ಒಂದು ವರ್ಷ ಕಾಲ ಯಾವುದೇ ಸಮಯದ ಅಂತರವಿಲ್ಲದೆ ನಿರಂತರವಾಗಿ ಕಂಟೆಂಟ್ ಪ್ರಕಟಿಸಿರಬೇಕು ಎಂದು ಸೂಚಿಸಲಾಗಿದೆ. ರಾಜ್ಯ ಅಥವಾ ಕೇಂದ್ರ ಸರ್ಕಾರ ಅಥವಾ ಅದರ ಏಜೆನ್ಸಿಗಳ ಎಲ್ಲಾ ಶಾಸನಬದ್ದ ಅವಶ್ಯಕತೆ ಅನುಸರಿಸಲು ವಿಫಲವಾದರೆ ರದುಗೊಳಿಸಲಾಗುತ್ತದೆ. ದೇಶದ ಕಾನೂನು ಉಲ್ಲಂಘಿಸುವ ಪದ, ದೃಶ್ಯಗಳು, ಆಡಿಯೋ, ಅಂಥ ಯಾವುದೇ ವಿಷಯ ಪ್ರಕಟಿಸಬಾರದು ಎಂದು ತಿಳಿಸಿದೆ.