ಬೆಂಗಳೂರು:
ರಾಜ್ಯ ಸರ್ಕಾರ 2024ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

2ನೇ ಶನಿವಾರ, 4ನೇ ಶನಿವಾರ ಹಾಗೂ ಭಾನುವಾರದ ರಜಾ ದಿನಗಳನ್ನು ಹೊರತುಪಡಿಸಿ 2024 ರಲ್ಲಿ 21 ಸಾರ್ವತ್ರಿಕ ರಜಾ ದಿನಗಳು ಇರಲಿವೆ.
ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಇದಕ್ಕೆ ಅನುಮೋದನೆ ನೀಡಲಾಗಿದೆ. ಈ ರಜಾ ಪಟ್ಟಿಯಲ್ಲಿ ಭಾನುವಾರಗಳಂದು ಬರುವ ಡಾ. ಬಿ. ಆರ್. ಅಂಬೇಡ್ಕರ ಜಯಂತಿ (14.04.2024) ಮತ್ತು ಮಹಾವೀರ ಜಯಂತಿ (21.04.2024) ಹಾಗೂ ಎರಡನೇ ಶನಿವಾರ ಬರುವ ವಿಜಯದಶಮಿ (12.10.2024) ರಜೆಗಳನ್ನು ಈ ರಜೆ ಪಟ್ಟಿಯಲ್ಲಿ ನಮೂದಿಸಿಲ್ಲ.
ಈ ರಜಾ ಪಟ್ಟಿಯಲ್ಲಿ ಭಾನುವಾರಗಳಂದು ಬರುವ ಡಾ. ಬಿ. ಆರ್. ಅಂಬೇಡ್ಕರ್ ಜಯಂತಿ (14.04.2024) ಮತ್ತು ಮಹಾವೀರ ಜಯಂತಿ (21.04.2024) ಹಾಗೂ ಎರಡನೇ ಶನಿವಾರದಂದು ಬರುವ ವಿಜಯದಶಮಿ (12.10.2024) ಈ ರಜೆ ಪಟ್ಟಿಯಲ್ಲಿ ನಮೂದಿಸಿರುವುದಿಲ್ಲ. ಈ ಪಟ್ಟಿಯಲ್ಲಿ ಸೇರಿಸಲಾಗಿರುವ ಮುಸಲ್ಮಾನರ ಹಬ್ಬಗಳು ನಿಗದಿತ ದಿನಾಂಕದಂದು ಬಾರದಿದ್ದರೆ ಸರ್ಕಾರಿ ಸೇವೆಯಲ್ಲಿರುವ ಮುಸಲ್ಮಾನರಿಗೆ ನಿಗದಿತ ರಜೆಗೆ ಬದಲಾಗಿ ಹಬ್ಬದ ದಿವಸ ರಜಾ ಮಂಜೂರು ಮಾಡಬಹುದು ಎಂದು ಸರ್ಕಾರ ಅಧಿಸೂಚನೆಯಲ್ಲಿ ತಿಳಿಸಿದೆ.

ಸಾರ್ವತ್ರಿಕ ರಜಾ ದಿನಗಳಲ್ಲಿ ರಾಜ್ಯಾದ್ಯಂತ ಸರ್ಕಾರಿ ಕಚೇರಿಗಳು ಮುಚ್ಚಲ್ಪಡುತ್ತವೆ. ಕಚೇರಿಯ ಜರೂರು ಕೆಲಸವನ್ನು ವಿಲೇವಾರಿ ಮಾಡುವ ಬಗ್ಗೆ ಇಲಾಖಾ ಮುಖ್ಯಸ್ಥರುಗಳು ಸೂಕ್ತ ವ್ಯವಸ್ಥೆ ಮಾಡತಕ್ಕದ್ದು ಎಂದು ಸರ್ಕಾರ ತಿಳಿಸಿದೆ.
ರಜೆ ಪಟ್ಟಿ ಪ್ರಕಾರ, ಅಕ್ಟೋಬರ್ ತಿಂಗಳಲ್ಲಿ ಹೆಚ್ಚಿನ ಸಾರ್ವಜನಿಕ ರಜೆಗಳು ಬಂದಿವೆ. ಆದರೆ ಫೆಬ್ರವರಿ ತಿಂಗಳಲ್ಲಿ ಯಾವುದೇ ವಿಶೇಷ ದಿನಗಳು ಮತ್ತು ಹಬ್ಬ ಹರಿದಿನಗಳು ಇಲ್ಲದ್ದರಿಂದ ಒಂದು ದಿನವೂ ಸರಕಾರಿ ರಜೆ ಬಂದಿಲ್ಲ.

 

2024 ಸಾರ್ವತ್ರಿಕ ರಜೆಗಳ ಪಟ್ಟಿ
ಜನವರಿ 15: ಸಂಕ್ರಾಂತಿ ಹಬ್ಬ
ಜನವರಿ 26: ಗಣರಾಜ್ಯೋತ್ಸವ
ಮಾರ್ಚ್‌ 8: ಮಹಾಶಿವರಾತ್ರಿ
ಮಾರ್ಚ್‌ 29: ಗುಡ್‌ಫ್ರೈಡೆ
ಏಪ್ರಿಲ್‌ 9: ಯುಗಾದಿ ಹಬ್ಬ
ಏಪ್ರಿಲ್‌ 11: ರಂಜಾನ್
ಮೇ 1: ಕಾರ್ಮಿರ ದಿನಾಚರಣೆ
ಮೇ 10: ಬಸವಜಯಂತಿ/ ಅಕ್ಷಯ ತೃತೀಯ
ಜೂನ್ 17: ಬಕ್ರೀದ್‌
ಜುಲೈ 17: ಮೊಹರಂ ಕಡೇ ದಿನ
ಆಗಸ್ಟ್‌ 15: ಸ್ವಾತಂತ್ರ್ಯ ದಿನಾಚರಣೆ
ಸೆಪ್ಟೆಂಬರ್‌ 7: ಗಣೇಶ ಚತುರ್ಥಿ
ಸೆಪ್ಟೆಂಬರ್‌ 16: ಈದ್‌ ಮಿಲಾದ್‌
ಅಕ್ಟೋಬರ್‌ 2: ಗಾಂಧಿ ಜಯಂತಿ
ಅಕ್ಟೋಬರ್‌ 11: ಮಹಾನವಮಿ/ ಆಯುಧ ಪೂಜೆ
ಅಕ್ಟೋಬರ್‌ 17: ಮಹರ್ಷಿ ವಾಲ್ಮೀಕಿ ಜಯಂತಿ
ಅಕ್ಟೋಬರ್‌ 31: ನರಕ ಚತುರ್ದಶಿ
ನವೆಂಬರ್‌ 1: ಕನ್ನಡ ರಾಜ್ಯೋತ್ಸವ
ನವೆಂಬರ್‌ 2: ಬಲಿಪಾಡ್ಯಮಿ
ನವೆಂಬರ್‌ 18: ಕನಕದಾಸ ಜಯಂತಿ
ಡಿಸೆಂಬರ್‌ 25: ಕ್ರಿಸ್‌ಮಸ್‌