ಬೆಂಗಳೂರು: ರಾಜ್ಯದಲ್ಲಿ ಪೆಟ್ರೋಲ್ ₹ 3.02 ಹಾಗೂ ಡೀಸೆಲ್ ಬೆಲೆಯಲ್ಲಿ ₹3 ಹೆಚ್ಚಳವಾಗಿದೆ.

ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ತೆರಿಗೆಯನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಹೆಚ್ಚಳ ಮಾಡಿ ಶನಿವಾರ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಪೆಟ್ರೋಲ್ ಚಿಲ್ಲರೆ ಮಾರಾಟದ ಬೆಲೆ ಇಂದಿನಿಂದ ₹102.85 ಹಾಗೂ ಡೀಸೆಲ್ ಬೆಲೆ ₹88.93 ಆಗುತ್ತದೆ. ಈ ದರವು, ಸಾಗಣೆ ವೆಚ್ಚದ ಆಧಾರದಲ್ಲಿ ರಾಜ್ಯದ ಬೇರೆಬೇರೆ ಪ್ರದೇಶಗಳಲ್ಲಿ ಸ್ವಲ್ಪ ಪ್ರಮಾಣದ ವ್ಯತ್ಯಾಸವಾಗಲಿದೆ.

ಪೆಟ್ರೋಲ್, ಡೀಸೆಲ್ ದರ:

ಪೆಟ್ರೋಲ್

ಹಳೆಯ ದರ: 99.83

ಪರಿಷ್ಕೃತ ದರ: 102.85

ಡೀಸೆಲ್:

ಹಳೆಯ ದರ: 85.93

ಪರಿಷ್ಕೃತ ದರ: 88.93

ಪೆಟ್ರೋಲ್ (ಪವರ್):

ಹಳೆಯ ದರ: 106.66

• ಪರಿಷ್ಕೃತ ದರ: 109.89

ಲೋಕಸಭೆ ಚುನಾವಣೆ ಘೋಷಣೆಯಾಗುವ ಮುನ್ನ ಮಾರ್ಚ್ ತಿಂಗಳಲ್ಲಿ ಕೇಂದ್ರ ಸರ್ಕಾರವು ದರ ಇಳಿಸಿದ ಬಳಿಕ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ₹2ರಷ್ಟು ಇಳಿಕೆಯಾಗಿತ್ತು.