Join The Telegram | Join The WhatsApp |
ಹೈದ್ರಾಬಾದ್:
ನಗರದ ಶಾಲೆಯಲ್ಲಿ ಆರನೇ ತರಗತಿ ವಿದ್ಯಾರ್ಥಿ ಅಯ್ಯಪ್ಪ ಮಾಲೆ ಧರಿಸಿ ಶಾಲೆಗೆ ಬಂದಾಗ ಶಿಕ್ಷಕರು ಪ್ರವೇಶ ನಿರಾಕರಿಸಿದ ಘಟನೆ ನಡೆದಿದೆ.
ವರದಿಗಳ ಪ್ರಕಾರ ಮಾಲಾಧಾರಿಗಳು 41 ದಿನಗಳ ಕಾಲ ವೃತ ನಡೆಸಿ ಆ ವೇಳೆ ಅವರು ಕಪ್ಪು ಬಟ್ಟೆಯನ್ನು ಧರಿಸುತ್ತಾರೆ. ಆದರೆ ಶಿಕ್ಷಕರು ತರಗತಿಗೆ ಪ್ರವೇಶ ಬೇಕೆಂದರೆ ಕಪ್ಪು ಬಟ್ಟೆ ಹಾಗೂ ತಿಲಕವನ್ನು ತೆಗೆದುಹಾಕುವಂತೆ ವಿದ್ಯಾರ್ಥಿಗೆ ಒತ್ತಾಯಿಸಿ ನಿಂದಿಸಿದ್ದಾರೆ ಎಂದು ತಿಳಿದುಬಂದಿದೆ.
ಈ ಘಟನೆಯಿಂದ ಗಲಭೆ ಉಂಟಾಗಿ ಅಯ್ಯಪ್ಪ ಸ್ವಾಮಿಗಳು ಪ್ರವೇಶ ನೀಡುವಂತೆ ಶಾಲೆಯ ಎದುರು ಪ್ರತಿಭಟನೆ ನಡೆಸಿದರು.
ಕರ್ನಾಟಕದಲ್ಲಿ ಪ್ರಾರಂಭವಾದ ಹಿಜಬ್ ವಿವಾದದಿಂದ ಈ ಎಲ್ಲಾ ವಿವಾದ ಶಾಲಾ ಸಮವಸ್ತ್ರದ ವಿಚಾರದ ಹಿನ್ನೆಲೆಯಲ್ಲಿ ಉಂಟಾಗಿದೆ. ಹಿಜಬ್ ವಿವಾದದಿಂದಾಗಿ ವಿದ್ಯಾರ್ಥಿಗಳು ಶಾಲೆಗಳಲ್ಲಿ ಏಕರೂಪದ ಡ್ರೆಸ್ ಕೋಡ್ ನಿಯಮವನ್ನು ಪಾಲಿಸಿ ಸಮಸ್ತವನ್ನು ಹೊರತುಪಡಿಸಿ ಹಿಜಾಬ್, ಸ್ಕಾಪ್ ಅಥವಾ ಯಾವುದೇ ಇತರ ಉಡುಗೆಗಳನ್ನು ಧರಿಸುವುದನ್ನು ನಿಷೇಧಿಸಲಾಯಿತು.ಇದು ಅಭಿವ್ಯಕ್ತಿ ಹಾಗೂ ಧಾರ್ಮಿಕ ಸ್ವಾತಂತ್ರ್ಯದ ಮೂಲಭೂತ ಹಕ್ಕುಗಳಿಗೆ ವಿರುದ್ಧವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಈ ಆದೇಶವನ್ನು ಹಲವರು ಪ್ರಶ್ನಿಸಿದ್ದಾರೆ.
Join The Telegram | Join The WhatsApp |