ಲಕ್ನೋ : ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ನಡೆದ ವಿಚಿತ್ರ ಘಟನೆಯೊಂದರಲ್ಲಿ, ಕಳ್ಳತನ ಮಾಡಲು ಮನೆಗೆ ನುಗ್ಗಿದ ಕಳ್ಳನೊಬ್ಬ, ಹವಾ ನಿಯಂತ್ರಣದ (ಎಸಿ) ಅಡಿಯಲ್ಲಿ ನಿದ್ದೆಗೆ ಜಾರಿದ ನಂತರ ಪೊಲೀಸರ ಕೈಗೆ ಸಿಕ್ಕಿಬಿದ್ದ ಘಟನೆ ವರದಿಯಾಗಿದೆ.
ಈತನ ಜೊತೆಗೆ ಬಂದಿದ್ದ ಉಳಿದ ಕಳ್ಳರು ಈತನನ್ನು ಗಾಢವಾದ ನಿದ್ರೆಯಿಂದ ಎಚ್ಚರಗೊಳಿಸಲು ವಿಫಲವಾಗಿ ಆತನನ್ನು ಮನೆಯಲ್ಲಿಯೇ ಬಿಟ್ಟುಹೋಗಿದ್ದಾರೆ.
ಲಭ್ಯ ಮಾಹಿತಿ ಪ್ರಕಾರ ಲಕ್ನೋದ ಇಂದಿರಾನಗರದ ಸೆಕ್ಟರ್ 20ರ ಮನೆಗೆ ಕಳ್ಳರ ತಂಡ ನುಗ್ಗಿದೆ. ವಾರಾಣಾಸಿಯಲ್ಲಿ ನಿಯೋಜನೆಗೊಂಡಿರುವ ಸರ್ಕಾರಿ ವೈದ್ಯರೊಬ್ಬರಿಗೆ ಈ ಮನೆ ಸೇರಿದೆ. ಕಳ್ಳರು ಮನೆಯಿಂದ ಕೈಗೆ ಬಂದಿದ್ದನ್ನೆಲ್ಲಾ ಎತ್ತಿಕೊಂಡುಹೋಗುವ ಯೋಚನೆಯಲ್ಲಿದ್ದರು.

ರೂಮಿನಲ್ಲಿ ಎಸಿ ಕಂಡ ನಂತರ ರೆಸ್ಟ್ ತೆಗೆದುಕೊಳ್ಳುವ ಯೋಚನೆಯಲ್ಲಿದ್ದ ಕಳ್ಳ ಅದನ್ನು ಸ್ಟಾರ್ಟ್‌ ಮಾಡಿದ್ದಾನೆ. ಆದರೆ, ನಶೆಯಲ್ಲಿದ್ದ ಈ ಕಳ್ಳ ಇನ್ವರ್ಟರ್ ಎತ್ತಲು ಹೋಗಿದ್ದಾನೆ. ಅದು ಆಗಲಿಲ್ಲ. ಆದಾಗ್ಯೂ, ಅವರು ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳಲು ನಿರ್ಧರಿಸಿ ಕೋಣೆಯಲ್ಲಿದ್ದ ಎಸಿ ಸ್ವಿಚ್ ಆನ್ ಮಾಡಿದ್ದಾನೆ, ನಂತರಆತನ ಅರಿವಿಗೆ ಬರುವ ಮೊದಲೇ ಆತ ಗಾಡ ನಿದ್ದೆಗೆ ಜಾರಿದ್ದಾನೆ.
ಇತರ ಕಳ್ಳರು ಅವನನ್ನು ಎಬ್ಬಿಸಲು ಪ್ರಯತ್ನಿಸಿದರು ಆದರೆ ಆ ವ್ಯಕ್ತಿಯು ಎದ್ದೇಳಲು ಸಾಧ್ಯವಾಗದ ಗಾಢವಾದ ನಿದ್ರೆಯ ಸ್ಥಿತಿಯಲ್ಲಿದ್ದ. ಬೆಳಗ್ಗೆ ಮನೆಯ ಗೇಟ್ ತೆರೆದಿರುವುದನ್ನು ಅಕ್ಕಪಕ್ಕದ ಮನೆಯವರು ಗಮನಿಸಿ ಬಂದು ನೋಡಿದಾಗ ಮನೆಯ ವಸ್ತುಗಳು ಕಾಣೆಯಾಗಿತ್ತು, ತಕ್ಷಣವೇ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ತಕ್ಷಣವೇ ಆಗಮಿಸಿದ ಪೊಲೀಸರು ಮನೆಯ ಪರಿಶೀಲನೆ ಮಾಡುತ್ತಿದ್ದಾಗ ಆರಾಮವಾಗಿ ಮಲಗಿಕೊಂಡಿದ್ದ ಕಳ್ಳ ಪತ್ತೆಯಾಗಿದ್ದಾನೆ.
ಪೊಲೀಸರು ಮನೆಗೆ ಬಂದ ನಂತರ ಕಳ್ಳರು ಬಹಳಷ್ಟು ವಸ್ತುಗಳನ್ನು ಕದ್ದೊಯ್ದಿರುವುದು ಕಂಡುಬಂದಿದೆ. ಆದರೆ, ಆರಾಮವಾಗಿ ಮಲಗಿದ್ದ ವ್ಯಕ್ತಿಯೊಬ್ಬನನ್ನು ಕಂಡು ಒಂದು ಕ್ಷಣ ಬೆಚ್ಚಿಬಿದ್ದಿದ್ದಾರೆ.
ಕಳ್ಳ ಎಚ್ಚರಗೊಂಡಾಗ, ಆತ ತನ್ನ ಮುಂದೆ ಪೊಲೀಸರು ಕುಳಿತಿರುವುದನ್ನು ಕಂಡು ಗಾಬರಿಗೊಂಡಿದ್ದಾನೆ ಮತ್ತು ಪೊಲೀಸರಿಗೆ ಇಡೀ ಕಥೆಯನ್ನು ವಿವರಿಸಿದ್ದಾನೆ. ಇನ್ವರ್ಟರ್ ಬ್ಯಾಟರಿ, ಗೀಸರ್, ಪಾತ್ರೆಗಳು ಮತ್ತು ಇತರ ಕೆಲವು ವಸ್ತುಗಳನ್ನು ಎರಡು ಚೀಲಗಳಲ್ಲಿ ಪ್ಯಾಕ್ ಮಾಡಿದ್ದಾನೆ.ಆತನನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಕರಣದ ತನಿಖೆ ನಡೆಯುತ್ತಿದ್ದು, ಇತರ ಕಳ್ಳರನ್ನು ಪತ್ತೆ ಹಚ್ಚಲು ಯತ್ನಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ಇತರ ಆರೋಪಿಗಳನ್ನು ಶೀಘ್ರವೇ ಬಂಧಿಸುವ ವಿಶ್ವಾಸವಿದೆ ಎಂದು ಪೊಲೀಸರು ತಿಳಿಸಿದ್ದಾರೆ.