ಚಂಡೀಗಢ : ಚಾಲಕನಿಲ್ಲದ ಗೂಡ್ಸ್ ರೈಲೊಂದು ಗಂಟೆಗೆ 100 ಕಿ.ಮೀ ವೇಗದಲ್ಲಿ ಸುಮಾರು 70 ಕಿಲೋ ಮೀಟರ್ ಸಂಚರಿಸಿದ ಘಟನೆಯೊಂದು ಪಂಜಾಬ್ನಲ್ಲಿ ನಡೆದಿದೆ. ಅದೃಷ್ಟವಶಾತ್, ಈ ಗೂಡ್ಸ್ ರೈಲಿನಿಂದಾಗಿ ಯಾವುದೇ ಅವಘಡಗಳು ಸಂಭವಿಸಿಲ್ಲ. ಈ ಚಾಲಕ ರಹಿತ ಗೂಡ್ಸ್ ರೈಲಿನ ಸಂಚಾರದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪಠಾಣಕೋಟ್ ರೈಲ್ವೆ ಸ್ಟೇಷನ್ನಲ್ಲಿ ಚಾಲಕ ರೈಲಿನಿಂದ ಇಳಿಯುವ ಮೊದಲು ಚಾಲಕ ಹ್ಯಾಂಡ್ ಬ್ರೇಕ್ ಹಾಕುವುದನ್ನು ಮರೆತಿದ್ದಾನೆ. ಹಾಗಾಗಿ, ಅದು ನಿಧಾನವಾಗಿ ಇಳಿಜಾರು ಮಾರ್ಗದಲ್ಲಿ
ಚಲಿಸಲಾರಂಭಿಸಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಈ ಚಾಲಕ ರಹಿತ ರೈಲು ಅವಘಡದಿಂದಾಗಿ ಯಾವುದೇ ಸಾವು ನೋವು ಸಂಭವಿಸಿಲ್ಲ, 53 ಬೋಗಿಗಳನ್ನು ಹೊಂದಿದ್ದ ಈ ಗೂಡ್ಸ್ ರೈಲು, ಪಂಜಾಬ್ನಿಂದ ಜಮ್ಮುಗೆ ಹೊರಟಿತ್ತು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಜಮ್ಮುವಿನಿಂದ ಪಂಜಾಬ್ಗೆ ತೆರಳುತ್ತಿದ್ದ ಸುಮಾರು 53 ವ್ಯಾಗನ್ಗಳಿದ್ದ ರೈಲು ಗಂಟೆಗೆ 100 ಕಿ.ಮೀ ವೇಗದಲ್ಲಿ ಚಲಿಸಿದೆ. ರೈಲು ತಂತಾನೇ ಚಲಿಸುತ್ತಿರುವುದು ತಕ್ಷಣ ಅಧಿಕಾರಿಗಳ ಗಮನಕ್ಕೆ ಬಂದಿದೆಯಾದರೂ ಅಷ್ಟು ವೇಗ ದಲ್ಲಿದ್ದ ರೈಲನ್ನು ನಿಲ್ಲಿಸುವುದು ಸವಾಲಿನ ಕೆಲಸವಾಗಿತ್ತು. ಕೊನೆಗೆ ರೈಲು 70 ಕಿ.ಮೀ. ಕ್ರಮಿಸಿದ ಬಳಿಕ ಹಳಿಯಲ್ಲಿ ಮರಳಿನ ಚೀಲಗ ಳನ್ನು ಇಟ್ಟು ರೈಲನ್ನು ನಿಲ್ಲಿಸಲಾಗಿದೆ. ತನ್ಮೂಲಕ ರೈಲ್ವೆ ಇಲಾಖೆಯ ಅಧಿಕಾರಿಗಳು ನಿಟ್ಟುಸಿರು ಬಿಟ್ಟಿದ್ದಾರೆ.
ಜಮ್ಮುವಿನಿಂದ ಪಂಜಾಬ್ಗೆ ಚಲಿಸುತ್ತಿದ್ದರೈಲು, ಚಾಲಕನ ಬದಲಾವಣೆಗೆ ಜಮ್ಮುವಿನ ಕರುವಾ ನಿಲ್ದಾಣದಲ್ಲಿ ಭಾನುವಾರ ಬೆಳಗ್ಗೆ 7.25ರ ಸುಮಾರಿಗೆ ನಿಂತಿತ್ತು. ರೈಲು ನಿಲ್ಲಿಸಿದ ಚಾಲಕ ಅದರಿಂದ ಕೆಳಗಿಳಿವ ವೇಳೆಗೆ ಹ್ಯಾಂಡ್ ಬ್ರೇಕ್ ಹಾಕಲು ಮರೆತುಬಿಟ್ಟಿದ್ದಾನೆ.
ಹೀಗಾಗಿ ಇಳಿಜಾರಿದ್ದ ಕಾರಣ ರೈಲು ಚಲಿಸಲು ಪ್ರಾರಂಭಿಸಿದೆ. ಈ ವೇಳೆ ಲೋಕೋ ಪೈಲಟ್ ಮತ್ತು ಸಹಾಯಕ ಲೋಕೋ ಪೈಲಟ್ ಯಾರೂ ರೈಲಿನಲ್ಲಿ ಇರಲಿಲ್ಲ. ಬಳಿಕ 9 ಗಂಟೆ ವೇಳೆಗೆ ಪಂಜಾಬ್ನ ಹೋಶಿಯಾರ್ಪುರ ಜಿಲ್ಲೆಯ ಗ್ರಾಮವೊಂದರಲ್ಲಿ ಮರಳಿನ ಚೀಲಗಳನ್ನು ಇಟ್ಟು ರೈಲನ್ನು ನಿಲ್ಲಿಸಲಾಗಿದೆ. ಚಾಲಕನಿಲ್ಲದೇ ರೈಲು ಓಡುತ್ತಿರುವ ದೃಶ್ಯಗಳು ಜಾಲತಾಣಗಳಲ್ಲಿ ವೈರಲ್ ಆಗಿವೆ. ಘಟನೆ ಬಗ್ಗೆ ರೈಲ್ವೆ ಇಲಾಖೆ ತನಿಖೆಗೆ ಆದೇಶಿಸಿದೆ.