Join The Telegram | Join The WhatsApp |
ಪ್ಯಾಂಗ್ಯಾಂಗ್: ಮಕ್ಕಳಿಗೆ ಬಾಂಬ್, ಗನ್, ಸ್ಯಾಟಲೈಟ್ ಎಂದು ನಾಮಕರಣ ಮಾಡಲು ಉತ್ತರ ಕೊರಿಯಾ ಸರ್ಕಾರ ನಾಗರಿಕರಿಗೆ ವಿಚಿತ್ರ ಆದೇಶ ನೀಡಿದೆ.
ನಾಗರಿಕರಲ್ಲಿ ದೇಶ ಭಕ್ತಿ ಹೆಚ್ಚಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಈ ಹಿಂದೆ ಅರೀ(ಪ್ರೀತಿಪಾತ್ರರು) ಹಾಗೂ ಸುಮಿ(ಸೌಂದರ್ಯವತಿ) ಎಂಬ ಹೆಸರುಗಳನ್ನು ಮಕ್ಕಳಿಗೆ ಇಡಲಾಗುತ್ತಿತ್ತು. ಇದು ತುಂಬ ಸೌಮ್ಯವಾದ ಹೆಸರುಗಳಾಗಿರುವುದರಿಂದ, ಇದರ ಬದಲಾಗಿ ಮಕ್ಕಳಿಗೆ ಸೈದ್ಧಾಂತಿಕ ಮತ್ತು ಮಿಲಿಟರಿ ಅರ್ಥ ಬರುವಂಥ ಹೆಸರುಗಳನ್ನು ಇಡುವಂತೆ ಆದೇಶಿಸಲಾಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿದೆ.
ಉತ್ತರ ಕೊರಿಯಾದಲ್ಲಿ ವಿದೇಶಿ ಸಂಗೀತಕ್ಕೆ ನಿಷೇಧವಿದ್ದು, ನಿಯಮ ಉಲ್ಲಂಘಿಸಿದರೆ ಅತಿ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ. ಅಲ್ಲದೇ ಕ್ಷೌರ ಕೂಡ ಸರ್ಕಾರ ಹೇಳಿದಂತೆಯೇ ಮಾಡಿಸಿಕೊಳ್ಳಬೇಕು ಎಂಬ ವಿಚಿತ್ರವಾದ ಕಠಿಣ ನಿಯಮಗಳು ಈ ದೇಶದಲ್ಲಿದೆ.
Join The Telegram | Join The WhatsApp |