ಜೈಪುರ: ಇನ್ನುಮುಂದೆ ಬೀದಿ ದನ ಅಥವಾ ಬೀದಿ ಹಸುಗಳ ಬಗ್ಗೆ ಮಾತನಾಡುವಾಗ ಅವುಗಳನ್ನು ಬಿಡಾಡಿ ದನ ಅಥವಾ ಬಿಡಾಡಿ ಹಸು ಎನ್ನುವ ಬದಲು ನಿರಾಶ್ರಿತ ಹಸು/ದನ ಎನ್ನಬೇಕು ಎಂದು ರಾಜಸ್ಥಾನ ಸರ್ಕಾರ ಆದೇಶ ಹೊರಡಿಸಿದೆ. ವಿಧಾನ ಸಭೆಯಲ್ಲಿ ಮಾತನಾಡಿದ ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವ ಜೋರಾರಾಮ್ ಕುಮಾವತ್ ಈ ಘೋಷಣೆ ಮಾಡಿ, ಗೋವುಗಳ ಬಗ್ಗೆ ಗೌರವಪೂರ್ವಕ ಪದ ಬಳಸಬೇಕು ಎಂದು ಕರೆ ನೀಡಿದರು.