ಅಯೋಧ್ಯೆ:
ರಾಮಮಂದಿರದಲ್ಲಿದರ್ಬಾ‌ರ್ ಹಾಲನ್ನು ಒಳಗೊಂಡಿರುವ ಮೊದಲ ಮಹಡಿ ಕಾಮಗಾರಿಯನ್ನು ಶೀಘ್ರದಲ್ಲೇ ಪ್ರಾರಂಭಿಸುವುದಾಗಿ ಶ್ರೀ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ನ ಕಟ್ಟಡ ನಿರ್ಮಾಣ ಸಮಿತಿಯ ಅಧ್ಯಕ್ಷ ನೃಪೇಂದ್ರ ಮಿಶ್ರಾ ತಿಳಿಸಿದ್ದಾರೆ.

ಈ ಕುರಿತು ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಶ್ರೀ ರಾಮಮಂದಿದಲ್ಲಿ ಬಾಕಿ ಉಳಿದಿರುವ ಮೊದಲ ಮತ್ತು ಎರಡನೇ ಮಹಡಿಯ ಕಾಮಗಾರಿಯನ್ನು ಶೀಘ್ರದಲ್ಲೇ ಆರಂಭಿಸಲಾಗುವುದು. ಮಂದಿರದ ಪ್ರಾಂಗಣದಲ್ಲಿರುವ ಪರ್ಕಟ ಮತ್ತು 795 ಮೀ. ಉದ್ದದ ಪರಿಕ್ರಮದ ಕಾಮಗಾರಿಯನ್ನೂ ಕೈಗೆತ್ತಿಕೊಂಡು ವರ್ಷಾಂತ್ಯ ದೊಳಗೆ ಮುಕ್ತಾಯಗೊಳಿಸಲು ಯೋಜಿಸಲಾಗಿದೆ ಎಂದು ತಿಳಿಸಿದರು.