ಬೆಳಗಾವಿ :
ಕಾಕತಿ ಗ್ರಾಮದ ಲಕ್ಷ್ಮೀ ನಗರದಲ್ಲಿ ಮುಸ್ಲಿಂ ಸಮುದಾಯದವರೊಬ್ಬರ ಮದುವೆಯಲ್ಲಿ ಮಧ್ಯರಾತ್ರಿವರೆಗೆ ಡಾಲ್ಬಿ ಹಚ್ಚಿ ಕುಣಿಯುತ್ತಿದ್ದಾಗ ಬೇಸತ್ತ ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಅನುಮತಿ ಪಡೆಯದೆ ಹಚ್ಚಿದ್ದ ಡಾಲ್ಬಿ ಬಂದ್ ಮಾಡಲು ಮುಂದಾದಾಗ ಪೊಲೀಸರ ಮೇಲೆಯೇ ಸೌಂಡ್ ಸಿಸ್ಟಮ್ ಮಾಲಿಕ ಹಾಗೂ ಯುವಕರು ಸೇರಿಕೊಂಡು ಪೋಲಿಸರ ಕೈಯಲ್ಲಿದ್ದ ಲಾಠಿಯನ್ನು ಕಸಿದುಕೊಂಡು ಪೊಲೀಸರಿಗೆ ಹೊಡೆದಿರುವ ಘಟನೆ ಗುರುವಾರ ಮಧ್ಯರಾತ್ರಿ 12.30 ಘಂಟೆಗೆ ನಡೆದಿದೆ.

ಕಾಕತಿ ಲಕ್ಷ್ಮೀ ನಗರದ ನಿವಾಸಿ ವಸಿಂ ಮಕಾಂದರ ಎಂಬುವರ ಮನೆಯ ಮುಂದೆ ನಡೆಯುತ್ತಿದ್ದ ಮದುವೆಯಲ್ಲಿ ಸಂತೋಷ ಭಂಡಾರಿ ಹಾಗೂ ರಾಘವೇಂದ್ರ ಶ್ರೀಶೈಲ ಲೋಗಾವಿ ಎಂಬವರು ಪೆಂಡಾಲ್ ಹಾಕಿದ್ದಾರೆ. ಪರವಾನಿಗೆ ಪಡೆಯದೆ ಸೌಂಡ್ ಸಿಸ್ಟಮ್ ಹಾಗೂ ಡಾಲ್ಬಿ ಹಚ್ಚಿದ್ದಾರೆ. ರಾತ್ರಿ 12 ಗಂಟೆಯಾದರೂ ಬಂದ್ ಮಾಡದ ಕಾರಣ ಅಕ್ಕಪಕ್ಕದ ಮನೆಯವರು ಬೇಸತ್ತು ಪೊಲೀಸ್ ಸಹಾಯವಾಣಿ 112 ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸ್ ಹೊಯ್ಸಳ ವಾಹನ ಕಾನೂನು ಬಾಹಿರವಾಗಿ ಪರವಾನಿಗೆ ಪಡೆಯದೆ ಹಚ್ಚಿದ್ದ ಡಾಲ್ಬಿ ಬಂದ್ ಮಾಡಲು ಮುಂದಾಗಿದ್ದ ಕಾಕತಿ ಪೇದೆ ಲತೀಫ್ ಮುಶಾಪುರೆ ಮೇಲೆ ಸೌಂಡ್ ಸಿಸ್ಟಮ್ ನಡೆಸುತ್ತಿದ್ದ ಸಂತೋಷ ಹಾಗೂ ರಾಘವೇಂದ್ರ ಅವರು ಹಲ್ಲೆ ನಡೆಸಿದರು. ಪೊಲೀಸರ ಕೈಯಲ್ಲಿದ್ದ ಲಾಠಿಯನ್ನು ಕಸಿದುಕೊಂಡು ಅವರ ಕುತ್ತಿಗೆಗೆ ಹೊಡೆದಿದ್ದಾರೆ.

ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮದುವೆ ಕಾರ್ಯಕ್ರಮ ಆಯೋಜಕ ವಸಿಂ ಮಕಾಂದರ, ಡಾಲ್ಬಿ ಮಾಲಿಕ ಸಂತೋಷ ಭಂಡಾರಿ ಹಾಗೂ ಜತೆಗಿದ್ದ ರಾಘವೇಂದ್ರ ಲೋಗಾವಿ ಎಂಬವರ ಮೇಲೆ IPC 353, 324, 332 ಹಾಗೂ KP act 2021 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಪೊಲೀಸರ ಮೇಲೆ ಹಲ್ಲೆ ನಡೆದರೂ ಇದುವರೆಗೆ ಆರೋಪಿಗಳನ್ನು ಬಧಿಸಲಾಗಿಲ್ಲ. ಕಾಕತಿಯಲ್ಲಿ ಸಾರ್ವಜನಿಕರ ಜೊತೆಗೆ ಪೊಲೀಸರಿಗೂ ರಕ್ಷಣೆ ಇಲ್ಲದಂತಾಗಿದೆ.

ಪೊಲೀಸರಿಗೆ ರಕ್ಷಣೆ ಕೊಡಬೇಕಾಗಿದ್ದ ಇಲಾಖೆ ಡಮ್ಮಿ ಕೇಸ್ ಹಾಕಿ ಅವರನ್ನು ಕೈ ಬಿಟ್ಟಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.