ಚಿಕ್ಕೋಡಿ : ಬಯಲಾಟದ ಮೂಲಕ ಬದುಕು ಕಟ್ಟಿಕೊಂಡು ಸುದೀರ್ಘ ಬಣ್ಣಹಚ್ಚಿದ ರಂಗಕಲಾವಿಧೆ ಯಮುನಾಬಾಯಿ ಲಕ್ಷ್ಮಣ ಕಲಾಚಂದ್ರ ಅವರಿಗೆ ರಾಜ್ಯ ಸರ್ಕಾರ ಸುರ್ವಣ ಕರ್ನಾಟಕ ಪ್ರಶಸ್ತಿ ೨೦೨೪ ಆಯ್ಕೆ ಮಾಡಿದೆ.
ಗಡಿನಾಡು ಬೆಳಗಾವಿ ಜಿಲ್ಲೆ ಸಣ್ಣಾಟ ಕೊಡುಗೆ ನೀಡಿದ ಜಿಲ್ಲೆಯಾಗಿದೆ ಅಂತಹುದರಲ್ಲಿ ಸಂಗ್ಯಾಬಾಳ್ಯಾ ರಾಧಾನಾಟ ದಪ್ಪಿನಾಟಗಳು ಗ್ರಾಮಿಣ ಮಟ್ಟದಲ್ಲಿ ಜಾತ್ರೆ ಹಬ್ಬ ಹರಿದಿನಗಳಲ್ಲಿ ಸಣ್ಣಾಟ ತಂಡಗಳು ಪ್ರದರ್ಶನ ನೀಡಿ ನೈಜಕಥೆಯನ್ನು ಪ್ರದರ್ಶನ ಮಾಡಿ ಕಲಾಪ್ರೇಕ್ಷಕರಿಗೆ ಸಣ್ಣಾಟದ ರಸದೌತನ ನೀಡಿದ ಕಲೆಯಾಗಿದೆ. ಅಂತಹುದರಲ್ಲಿ ಚಿಕ್ಕೋಡಿ ಗಡಿಭಾಗದ ಧುಳಗನವಾಡಿ ಸಣ್ಣ ಗ್ರಾಮದ ಯಮನಾಬಾಯಿ ಲಕ್ಷ್ಮಣ ಕಲಾಚಂದ್ರ ಇವರು ಹದಿನೈದನೇಯ ವಯಸ್ಸಿಗೆ ಬಣ್ಣಹಚ್ಚಿ ರಂಗಸಜ್ಜಿಕೆಗೆ ಪಾರ್ದಾಪಣೆ ಮಾಡಿ ಉತ್ತರ ಕರ್ನಾಟಕದ ವಿವಿಧ ಜಾತ್ರೆ ಹಬ್ಬಗಳಲ್ಲಿ ನೆರೆಯ ಮಹಾರಾಷ್ಟ್ರದಲ್ಲಿ ಗಡಿ ಹಳ್ಳಿಗಳಲ್ಲಿ ಕೂಡಾ ಕನ್ನಡದ ಬಯಲಾಟ ಪ್ರದರ್ಶನ ನೀಡಿ ಜನ ಮೆಚ್ಚುಗೆ ಪಡೆದಿದ್ದಾರೆ.
ಕಳೆದ ಆರುವತ್ತು ವರ್ಷಗಳ ಬಯಲಾಟದ ಸಂಗ್ಯಾ ಬಾಳ್ಯಾ ರಾಧಾನಾಟದಲ್ಲಿ ಸ್ತ್ರೀಪಾತ್ರ ನಿರ್ವಹಿಸಿ ಬಯಲಾಟಕ್ಕೆ ರಂಗು ತುಂಬಿದ ಮಹಾನ್ ಕಲಾವಿದೆ ಅಂದಿನ ಕಾಲದಲ್ಲಿ ಬಡತನ ಬೇಗೆ ಇದ್ದರು ಕೂಡಾ ಮನೆಗೆ ಮಗಳು ದೊಡ್ಡವಳಾಗಿ ಕುಟುಂಬ ನಿರ್ವಹಣಿ ಮಾಡಿ ಬದುಕು ಕಟ್ಟಿಕೊಳ್ಳಲು ಕಲೆಯೆ ಆಶ್ರೆಯ ನೀಡಿದೆ.
ಪ್ರಸಕ್ತ ಸಾಲಿನ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಯಮುನಾಬಾಯಿ ಲಕ್ಷ್ಮಣ ಕಲಾಚಂದ್ರ ಇವರ ಬಯಲಾಟ ಸಾಧನೆಯನ್ನು ಗುರುತಿಸಿ ಸುರ್ವಣ ಕರ್ನಾಟಕ ಪ್ರಶಸ್ತಿ ೨೦೨೪ ಆಯ್ಕೆ ಮಾಡಿರುವದು ಕಲಾವಿದೆ ಯಮನವ್ವಾ ಕಲಾಚಂದ್ರ ಹಾಗೂ ಕುಟುಂಬದವರು ಸಂತಸ ಹಂಚಿಕೊಂಡು ಈಗಲಾದರು ೮೬ ವರ್ಷದ ಇಳಿ ವಯಸ್ಸಿನಲ್ಲಿ ಸರ್ಕಾರ ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಿದ್ದು ಗಡಿ ಭಾಗದ ಕಲಾವಿದರಿಗೆ ಉತ್ತೇಜನ ನೀಡಿದಂತಾಗಿದೆ. ನನ್ನಕಲೆಯನ್ನು ಮನ್ನಿಸಿ ಸುವರ್ಣ ಕರ್ನಾಟಕ ಪ್ರಶಸ್ತಿಗೆ ಆಯ್ಕೆಮಾಡಿದಕ್ಕೆ ಕರ್ನಾಟಕ ಘನ ಸರ್ಕಾರಕ್ಕೆ ಧನ್ಯವಾದಗಳು.
ಗಡಿಭಾಗದ ಹಲವು ಕನ್ನಡಪರ ಸಂಘಟನೆ ಕಲಾಬಳಗದವರು ಕಲಾವಿದೆ ಪ್ರಶಸ್ತಿ ಬಂದಿರುವದಕ್ಕೆ ಸಂತಸ ವ್ಯಕ್ತಪಡಿಸಿದರು. ಇವರಿಗೆ ಈ ಹಿಂದೆ ೨೦೧೫-೧೬ನೇ ಸಾಲಿನ ಕರ್ನಾಟಕ ಯಕ್ಷಗಾನ ಬಯಲಾಟ ಪ್ರಶಸ್ತಿ ಲಭಿಸಿದೆ.