ಸಂಕೇಶ್ವರ : ಮನೆಯೊಂದಕ್ಕೆ ನುಗ್ಗಿದ ಖದೀಮ ಮನೆಯಲ್ಲಿದ್ದ 9.5 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮತ್ತು ನಗದು ಹಣವನ್ನು ದೋಚಿ ಪರಾರಿಯಾಗಿರುವ ಘಟನೆ ಪಟ್ಟಣದಲ್ಲಿ ಜರುಗಿದೆ.
ಕಳೆದ ಎರಡು ದಿನಗಳ ಹಿಂದೆ ಪಟ್ಟಣದ ಮಡ್ಡಿಗಲ್ಲಿಯ ರಹವಾಸಿಯಾದ ಇಫ್ತಕಾರ ಗೌಸಸಾಹೇಬ ಮೋಮಿನ ಎಂಬುವರ ಮನೆಗೆ ಮಧ್ಯರಾತ್ರಿ ನುಗ್ಗಿದ ಕಳ್ಳರು 141 ಗ್ರಾಂ(14) ತೋಲಿ ಚಿನ್ನಾಭರಣ ಮತ್ತು 30 ಗ್ರಾಂ (ತೊಲೆ) ಬೆಳ್ಳಿ ಮತ್ತು 3.5 ಲಕ್ಷ ನಗದು ಹಣ ಹೀಗೆ ಒಟ್ಟು 9.5 ಲಕ್ಷ ಮೌಲ್ಯದ ಚಿನ್ನಾಭರಣ ನಗದು ದೋಚಿಕೊಂಡು ಕಳ್ಳರು ಪರಾರಿಯಾಗಿದ್ದಾರೆ. ಕಳ್ಳತನ ಆದ ಸಂದರ್ಭದಲ್ಲಿ ಮನೆಯಲ್ಲಿ ಯಾರು ಇದ್ದಿರಲಿಲ್ಲ. ಮನೆಯವರು ಮನೆಗೆ ಬಂದ ಬಳಿಕ ಈ ಕಳ್ಳತನ ಪ್ರಕರಣ ಪತ್ತೆಯಾಗಿದೆ.
ಸಂಕೇಶ್ವರ ಪಿಎಸ್ಐ ಶಿವಶಂಕರ ಮುಕ್ರಿ ಅವರ ಮಾರ್ಗದರ್ಶನದಲ್ಲಿ ಬುಧವಾರ ಬೆಳಿಗ್ಗೆ ಶ್ವಾನಗಳೊಂದಿಗೆ ಬೆರಳಚ್ಚು ತಜ್ಞರು ಘಟನಾ ಸ್ಥಳಕ್ಕೆ ಆಗಮಿಸಿ ಮನೆಯಲ್ಲಿ ಶೋಧನೆ ಮಾಡಲು ಆರಂಭಿಸಿದರು. ಓರ್ವ ಕಳ್ಳನು ಮಹಡಿಯ ಮೇಲೆ ಹತ್ತಿ ಆಭರಣಗಳನ್ನು ದೋಚಿ ಬ್ಯಾಗನಲ್ಲಿ ಹಾಕುವ ದೃಶ್ಯಾವಳಿಗಳು ಸಿ.ಸಿ. ಕ್ಯಾಮೆರಾದಲ್ಲಿ ಸೆರೆಯಾಗಿರುತ್ತವೆ.
ಚಾಣಾಕ್ಷ ಕಳ್ಳನು ಮುಖ ಕಾಣದಂತೆ ಮುಖವಾಡ ಧರಿಸಿದ್ದನು. ಕಳ್ಳನು ಪ್ರಾರ್ಥನಾ ಮಂದಿರದ ಸಿ.ಸಿ. ಕ್ಯಾಮರಾದಲ್ಲಿಯೂ ಸಹ ಕಂಡು ಬಂದಿದ್ದಾನೆ. ಪೋಲಿಸರು ಈ ಎಲ್ಲ ಸಿ.ಸಿ. ಕ್ಯಾಮರಾ ದೃಶ್ಯಾವಳಿಗಳಲ್ಲಿನ ಮಾಹಿತಿಯನ್ನು ಕಲೆ ಹಾಕಿ ಕಳ್ಳನ ಸೆರೆ ಹಿಡಿಯಲು ಸಂಕೇಶ್ವರ ಪೋಲಿಸರು ಜಾಲ ಬಿಸಿದ್ದಾರೆರೀ ಕುರಿತು ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.