ಬೆಳಗಾವಿ :
ಶಾಲಾ-ಕಾಲೇಜುಗಳು ಇರುವ ರಸ್ತೆಯಲ್ಲಿ ಹಂಪ್ಸ್ ಅಳವಡಿಸಬೇಕು. ಇದು ವಿದ್ಯಾರ್ಥಿಗಳ ಮನವಿ.

ಬೆಳಗಾವಿಯ ಕಾಲೇಜು ರಸ್ತೆ ಅತ್ಯಂತ ಜನನಿಬಿಢ ಹಾಗೂ ಅತಿ ಹೆಚ್ಚು ವಾಹನಗಳು ಹಾಯ್ದು ಹೋಗುವ ರಸ್ತೆ. ಶಾಲಾ ಕಾಲೇಜುಗಳು ಇದ್ದಾಗ ಈ ರಸ್ತೆಯಲ್ಲಿ ಸಂಚರಿಸುವುದು ಬಹು ಕಷ್ಟದ ಸಂಗತಿ. ಬೆಳಗಿನ ಹೊತ್ತು ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ತರಗತಿಗಳಿಗೆ ಹಾಜರಾಗಬೇಕು. ಆದರೆ, ಒಂದೇ ಸಮನೆ ಯಮ ವೇಗದಲ್ಲಿ ಆಗಮಿಸುವ ವಾಹನಗಳ ರಭಸದ ವೇಗ ಗಮನಿಸಿದರೆ ಮೈ ಜುಮ್ ಎನ್ನುತ್ತದೆ. ಅಷ್ಟೊಂದು ವೇಗದಲ್ಲಿ ವಾಹನಗಳು ಹಾದು ಹೋಗುತ್ತವೆ. ವಿದ್ಯಾರ್ಥಿಗಳು ಹಲವು ನಿಮಿಷಗಳವರೆಗೂ ಕಾದರೂ ರಸ್ತೆ ತೆರವುಗೊಳ್ಳುವುದಿಲ್ಲ. ಬಸ್ ತಡವಾಗಿ, ಟ್ರಾಫಿಕ್ ಸಮಸ್ಯೆ ಮುಂತಾದವುಗಳಿಂದ ಮೊದಲೇ ತರಗತಿಗೆ ತಡವಾಗಿರುತ್ತದೆ. ಇಲ್ಲಿ ಬಂದು ರಸ್ತೆಯ ರಣ ಬಿಸಿಲಿನಲ್ಲಿ ಕೆಲಕಾಲ ನಿಲ್ಲುವ ಪ್ರಸಂಗ ಎದುರಾಗುವುದರಿಂದ ವಿದ್ಯಾರ್ಥಿಗಳು ಮತ್ತಷ್ಟು ತೊಂದರೆಗೆ ಸಿಲುಕುತ್ತಾರೆ.

ಬೆಳಗಾವಿ ಮಹಾನಗರದ ಕಾಲೇಜು ರಸ್ತೆ ಸೇರಿದಂತೆ ಶಾಲಾ-ಕಾಲೇಜುಗಳು ಇರುವ ರಸ್ತೆಗಳಲ್ಲಿ ಹಂಪ್ಸ್ ಅಳವಡಿಸಲು ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ. ಈ ಮೂಲಕ ವಿದ್ಯಾರ್ಥಿಗಳ ಬೇಡಿಕೆಯನ್ನು ಈಡೇರಿಸಬೇಕು. ಜಿಲ್ಲಾ ಪೊಲೀಸ್ ಹಾಗೂ ನಗರ ಪೊಲೀಸ್ ಆಯುಕ್ತರ ಕಚೇರಿ ಈ ನಿಟ್ಟಿನಲ್ಲಿ ಗಮನಹರಿಸಿ ವಿದ್ಯಾರ್ಥಿಗಳು ಪ್ರತಿ ದಿನ ಎದುರಿಸುವ ಸಮಸ್ಯೆಗೆ ತಾರ್ಕಿಕ ಅಂತ್ಯ ಹಾಡಬೇಕಾಗಿದೆ.

ಚಿಕ್ಕೋಡಿಯಲ್ಲಿ ಪ್ರತಿಭಟನೆ :
ಚಿಕ್ಕೋಡಿ ಪಟ್ಟಣದ ಆರ್.ಡಿ.ಶಾಲಾ ಕಾಲೇಜುನಲ್ಲಿ ಸಾವಿರಾರು ವಿದ್ಯಾರ್ಥಿಗಳ ಓದುತ್ತಿದ್ದು,ಶಾಲಾ ಕಾಲೇಜು ಬಿಟ್ಟ ನಂತರ ರಸ್ತೆಯಲ್ಲಿ ಸಂಚರಿಸುವುದು ದುಸ್ತರವಾಗಿದೆ. ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಓದುತ್ತಿದ್ದು,ಯಾವುದೇ ಅಪಘಾತ ಆಗದಂತೆ ರಸ್ತೆಯಲ್ಲಿ ಹಂಪ್ಸ್ ಹಾಕುವಂತೆ ಎಬಿವಿಪಿ ವಿದ್ಯಾರ್ಥಿಗಳು ನಿಪ್ಪಾಣಿ-ಮುಧೋಳ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ.

ಎಬಿವಿಪಿ ಮುಖಂಡ ಪ್ರಸಾದ ಮಾತನಾಡಿ, ಆ‌ರ್.ಡಿ.ಕಾಲೇಜು ರಸ್ತೆಯಲ್ಲಿ ಹಂಪ್ಸ್ ಹಾಕುವಂತೆ ಪ್ರತಿಭಟನೆ ನಡೆಸಿದ್ದೇವೆ. ಹಂಪ್ಸ್
ಇಲ್ಲದೆ ಅಪಘಾತವಾಗುವ ಸಂಭವ ಇದೆ.ಈ ಕಾರಣಕ್ಕಾಗಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡ ಹಂಪ್ಸ್ ಹಾಕುವಂತೆ ಒತ್ತಾಯಿಸಿದರು.ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.