ಮುಂಬೈ: ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿ ಯಾರೆಂಬಂತೆ ನಡೆಯುತ್ತಿದ್ದ ಗೊಂದಲಕ್ಕೆ ತೆರೆ ಬಿದ್ದಿದೆ. ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ದೇವೇಂದ್ರ ಫಡ್ನವಿಸ್ ಆಯ್ಕೆಯಾಗಿದ್ದು, ಅವರೇ ಮುಂದಿನ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಲಿದ್ದಾರೆ. ನೀರು ಬತ್ತಿ ಹೋಗಿದೆ ಎಂದು ದಡದಲ್ಲಿ ಮನೆಕಟ್ಟಬೇಡಿ ನಾನು ಸಾಗರ ಮತ್ತೆ ಹಿಂದಿರುಗುತ್ತೇನೆ ಎಂದು 2019ರಲ್ಲಿ ಫಡ್ನವಿಸ್ ಈ ಸಾಲುಗಳನ್ನು ಹೇಳಿದ್ದರು.

ಇಂದು ದೇವೇಂದ್ರ ಫಡ್ನವೀಸ್ ಅವರು ಸಿಎಂ ಆಗಿ ಆಯ್ಕೆಯಾದಾಗ ಆ 5 ವರ್ಷಗಳ ಹಿಂದಿನ ಸಾಲು ಸಂಪೂರ್ಣವಾಗಿ ಸರಿ ಎಂದು ಸಾಬೀತಾಗಿದೆ. ದೇವೇಂದ್ರ ಫಡ್ನವೀಸ್ ಅವರು ಸಂಪೂರ್ಣ ಸ್ಥಾನಮಾನ ಮತ್ತು ಪ್ರಭಾವದೊಂದಿಗೆ ಮಹಾರಾಷ್ಟ್ರ ರಾಜಕೀಯಕ್ಕೆ ಮರಳಿದ್ದಾರೆ.

ಮುಂಬೈನ ಆಜಾದ್ ಮೈದಾನದಲ್ಲಿ ಗುರುವಾರ (ಡಿಸೆಂಬರ್‌ 5) ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವಿಸ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಬಿಜೆಪಿ ನಾಯಕತ್ವವು ಬುಧವಾರ ಮುಖ್ಯಮಂತ್ರಿ ಹುದ್ದೆಗೆ ಫಡ್ನವೀಸ್ ಅವರ ಹೆಸರನ್ನು ಅಂತಿಮಗೊಳಿಸಿದೆ, ಯಾರು ಉನ್ನತ ಹುದ್ದೆಯನ್ನು ಪಡೆಯುತ್ತಾರೆ ಎಂಬ ದೀರ್ಘಾವಧಿಯ ಕುತೂಹಲಕ್ಕೆ ಈ ಮೂಲಕ ತೆರೆ ಬಿದ್ದಿದೆ. ಅವರ ಹೆಸರನ್ನು ಹೊಸದಾಗಿ ಆಯ್ಕೆಯಾದ ಶಾಸಕರ ಮುಂದೆ ಪ್ರಸ್ತಾಪಿಸಲಾಯಿತು ಮತ್ತು ಅವರು ನುಮೋದನೆ ನೀಡುವ ಮೂಲಕ ಆಯ್ಕೆಯನ್ನು ಅಧಿಕೃತಗೊಳಿಸಿದರು.

ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟವು ಅಭೂತಪೂರ್ವ ವಿಜಯಗಳಿಸಿ ಎರಡು ವಾರಗಳ ನಂತರ ಮುಂಬೈನ ಆಜಾದ್ ಮೈದಾನದಲ್ಲಿ ಅದ್ಧೂರಿ ಪ್ರಮಾಣ ವಚನ ಸಮಾರಂಭಕ್ಕೆ ಸಿದ್ಧತೆ ನಡೆಯುತ್ತಿದೆ.

ಫಡ್ನವೀಸ್ ಅವರು ಶಿವಸೇನಾ ಮುಖ್ಯಸ್ಥ ಏಕನಾಥ ಶಿಂಧೆ ಮತ್ತು ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರೊಂದಿಗೆ ರಾಜ್ಯಪಾಲ ಸಿ.ಪಿ. ರಾಧಾಕೃಷ್ಣನ್ ಅವರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದರು.
ಬಿಜೆಪಿ ಶಾಸಕರ ಸಭೆಯಲ್ಲಿ, ಫಡ್ನವೀಸ್ ಅವರು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಿದ ನಂತರ ಮಾತನಾಡಿದ ಅವರು, ಬಿಜೆಪಿಯ 132 ಶಾಸಕರ ಬೆಂಬಲವಿಲ್ಲದೆ ನಾನು ಇಲ್ಲಿ ಇರಲು ಸಾಧ್ಯವಿಲ್ಲ ಎಂದು ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಅವರ ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸಿದ ಅವರು, ಬಿಜೆಪಿಯ ‘ಡಬಲ್ ಇಂಜಿನ್’ ಸರ್ಕಾರವು ಮಹಾರಾಷ್ಟ್ರದಲ್ಲಿ ಅಭಿವೃದ್ಧಿಯನ್ನು ತರುತ್ತದೆ ಎಂದು ಹೇಳಿದರು. ಪ್ರಧಾನಿಯವರ ‘ಏಕ್ ಹೇ ತೋ ಸೇಫ್ ಹೈ’ ಘೋಷಣೆಯಿಂದಾಗಿ ಮಹಾಯುತಿಯ ವಿಜಯವಾಗಿದೆ ಎಂದರು.

ಮಹಾಯುತಿ ಮೈತ್ರಿಕೂಟವು ಮಹಾರಾಷ್ಟ್ರ ವಿಧಾನಸಭೆಯಲ್ಲಿ 288 ಸ್ಥಾನಗಳಲ್ಲಿ 230 ಸ್ಥಾನಗಳನ್ನು ಗೆದ್ದುಕೊಂಡಿತು, ಶಿವಸೇನೆ ಮುಖಂಡರು ಶಿಂಧೆ ಅವರು ಚುನಾವಣೆಯಲ್ಲಿ ಮೈತ್ರಿಕೂಟವನ್ನು ಮುನ್ನಡೆಸಿದರು ಮತ್ತು ಅವರೇ ಮುಖ್ಯಮಂತ್ರಿಯಾಗಿ ಉಳಿಯಬೇಕು ಎಂದು ಒತ್ತಾಯಿಸಿದರು. ಆದರೆ ಬಿಜೆಪಿಯು ತಾನು ಸ್ಪರ್ಧಿಸಿದ್ದ 148 ಸ್ಥಾನಗಳ ಪೈಕಿ 132 ಸ್ಥಾನಗಳನ್ನು ಗೆದ್ದ ಬಿಜೆಪಿ ಈ ಬಾರಿ ಉನ್ನತ ಸ್ಥಾನ ತನಗೆ ನೀಡಬೇಕು ಎಂದು ಹೇಳಿತ್ತು. ಅಂತಿಮವಾಗಿ, ಶಿಂಧೆ ಅವರು ಸರ್ಕಾರ ರಚನೆಗೆ ಅಡ್ಡಿಯಾಗುವುದಿಲ್ಲ ಮತ್ತು ಮುಖ್ಯಮಂತ್ರಿ ಸ್ಥಾನದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ತೆಗೆದುಕೊಳ್ಳುವ ಯಾವುದೇ ನಿರ್ಧಾರವನ್ನು ಒಪ್ಪಿಕೊಳ್ಳುವುದಾಗಿ ಸಾರ್ವಜನಿಕವಾಗಿ ಹೇಳಿದರು.

ನಮ್ಮ ಮೇಲಿನ ಜವಾಬ್ದಾರಿ ಹೆಚ್ಚಿದೆ: ದೇವೇಂದ್ರ ಫಡಣವೀಸ್ :

ಬಿಜೆಪಿ ನಾಯಕ ದೇವೆಂದ್ರ ಫಡಣವೀಸ್ ಅವರು ಮೂರನೇ ಬಾರಿಗೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಅಧಿಕಾರದ ಗದ್ದುಗೆ ಏರಲು ಸಜ್ಜಾಗಿದ್ದಾರೆ. ಗುರುವಾರ ಪ್ರಮಾಣವಚನ ಸ್ವೀಕರಿಸಲಿರುವ ಅವರು, ಸರ್ಕಾರದ ಮುಂದಿರುವ ಸವಾಲುಗಳ ಬಗ್ಗೆ ಮಾತನಾಡಿದ್ದಾರೆ.

ರಾಜ್ಯ ಬಿಜೆಪಿ ಶಾಸಕಾಂಗ ಪಕ್ಷದ ನಾಯಕನಾಗಿಯೂ ಆಯ್ಕೆಯಾಗಿರುವ ಫಡಣವೀಸ್, ತಮ್ಮ ಮೇಲೆ ನಂಬಿಕೆ ಇರಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ತಿಳಿಸಿದ್ದಾರೆ.

ನಮ್ಮ ಮೇಲಿನ ಜವಾಬ್ದಾರಿ ಹೆಚ್ಚಿದ್ದು, ಕಷ್ಟಪಟ್ಟು ಕೆಲಸ ಮಾಡಬೇಕಿದೆ. ಜನರು ನಮ್ಮ ಮೇಲಿಟ್ಟಿರುವ ನಿರೀಕ್ಷೆಗಳನ್ನು ಈಡೇರಿಸುವುದೇ ನಮ್ಮ ಧೈಯವಾಗಿದೆ. ಇದನ್ನು ಸಾಧಿಸಲು ನಾವು ನಮ್ಮ ಮಿತ್ರಪಕ್ಷಗಳೊಂದಿಗೆ ಒಟ್ಟಾಗಿ ಕೆಲಸ ಮಾಡಬೇಕಿದೆ’ ಎಂದು ಹೇಳಿದರು.

ಬಿಜೆಪಿಯು 2019ರಲ್ಲಿ ಜನಾದೇಶವನ್ನು ಹೊಂದಿತ್ತು. ಆದರೆ ಅದನ್ನು ಕಸಿದುಕೊಳ್ಳಲಾಯಿತು’ ಎಂದು ಶಿವಸೇನಾ(ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಅವರನ್ನು ಪರೋಕ್ಷವಾಗಿ ಟೀಕಿಸಿದರು.

ಮೊದಲ ಎರಡುವರೆ ವರ್ಷ ನಮ್ಮನ್ನು ಗುರಿಯಾಗಿಸಿಕೊಳ್ಳಲಾಯಿತು. ಆದರೂ ಯಾವೊಬ್ಬ ಶಾಸಕನು ಪಕ್ಷ ತೊರೆಯಲಿಲ್ಲ. 2022ರಲ್ಲಿ ಅಧಿಕಾರವು ನಮಗೆ ಒಲಿದಿದ್ದು, ಇದೀಗ ಭಾರಿ ಬಹುಮತದಿಂದ ಗೆದ್ದಿದ್ದೇವೆ’ ಎಂದು ಹೇಳಿದರು.

ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡಿದ ನನ್ನಂತಹ ವ್ಯಕ್ತಿಯನ್ನು ಮೂರನೇ ಬಾರಿಗೆ ಈ ಸ್ಥಾನದಲ್ಲಿ(ಮುಖ್ಯಮಂತ್ರಿ) ನಿಲ್ಲಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಾನು ಧನ್ಯವಾದ ತಿಳಿಸುತ್ತೇನೆ. ಒಗ್ಗಟ್ಟಾಗಿದ್ದರೆ ಸುರಕ್ಷಿತರಾಗಿರುತ್ತೇವೆ. ಮೋದಿ ಇದ್ದರೆ ಇದೆಲ್ಲ ಸಾಧ್ಯ ಎಂದು ಹೇಳಿದರು

ಗುರುವಾರ ಮುಂಬೈನ ಆಜಾದ್ ಮೈದಾನದಲ್ಲಿ ಪ್ರಮಾಣ ವಚನ ಸಮಾರಂಭ ನಡೆಯಲಿದ್ದು, ಮುಖ್ಯಮಂತ್ರಿಯಾಗಿ ದೇವೇಂದ್ರ ಫಡಣವೀಸ್, ಉಪಮುಖ್ಯಮಂತ್ರಿಯಾಗಿ ಏಕನಾಥ ಶಿಂದೆ ಮತ್ತು ಅಜಿತ್ ಪವಾರ್ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.