ತುಮಕೂರು: ದೆಹಲಿಯಲ್ಲಿ ಹಿಂದಿ ಭಾಷೆ ಬಹಳ ಅನಿವಾರ್ಯ. ಯಾಕೆಂದರೆ ಇಲ್ಲಿ ಹಿಂದಿ ಪ್ರಾಬಲ್ಯತೆ ಹೊಂದಿದೆ. ಹೀಗಾಗಿ ಜನಪ್ರತಿನಿಧಿಗಳಾಗಿ ಆಯ್ಕೆಯಾದವರು ದೆಹಲಿಗೆ ಹೋದ ನಂತರ ಹಿಂದಿ ಕಲಿಯಲು ಆಸಕ್ತಿ ತೋರುತ್ತಾರೆ. ಇದೀಗ ನಮ್ಮ ಕರ್ನಾಟಕದ ಕೇಂದ್ರ ಸಚಿವ ವಿ. ಸೋಮಣ್ಣ ಬಹಳ ಶ್ರದ್ದೆಯಿಂದ ಹಿಂದಿ ಭಾಷೆ ಕಲಿಯುತ್ತಿದ್ದಾರಂತೆ. ಈ ವಿಷಯವನ್ನು ಸ್ವತ: ಸಚಿವರೇ ಸುದ್ದಿಗೋಷ್ಠಿಯಲ್ಲಿ ಬಹಿರಂಗಪಡಿಸಿದ್ದಾರೆ. ಈಗ ನಾನು ಹಿಂದಿ ಕಲಿಯುತ್ತಿದ್ದೇನೆ. ಇದಕ್ಕಾಗಿ ದೆಹಲಿಯಲ್ಲಿ ಪ್ರತಿದಿನ ಬೆಳಗ್ಗೆ 6 ಗಂಟೆಗೆ ಹಿಂದಿ ಕ್ಲಾಸ್‌ಗೆ ಹೋಗುತ್ತೇನೆ. ಇನ್ನು 6 ತಿಂಗಳಲ್ಲಿ ಸಂಸತ್‌ನಲ್ಲಿ ಹಿಂದಿಯಲ್ಲೇ ಮಾತನಾಡುವೆ. ನಾಡಿದ್ದು ಮಲೇಷ್ಯಾ ಪ್ರಧಾನಿ ಭಾರತಕ್ಕೆ ಬರುತ್ತಿದ್ದಾರೆ. ಅವರನ್ನು ಸ್ವಾಗತಿಸುವ ಜವಾಬ್ದಾರಿಯನ್ನು ಪ್ರಧಾನಿ ನರೇಂದ್ರ ಮೋದಿಯವರು ನನಗೆ ಕೊಟ್ಟಿದ್ದಾರೆ. ನನಗೆ ಭಾಷಾ ಸಮಸ್ಯೆ ಇದೆ ಎಂದು ಪ್ರಧಾನಿಗೆ ಹೇಳಿದೆ. ಪರವಾಗಿಲ್ಲ, ಮ್ಯಾನೇಜ್ ಮಾಡಿ, ಜವಾಬ್ದಾರಿ ನಿರ್ವಹಿಸಿ ಎಂದು ಮೋದಿ ಹೇಳಿದ್ದಾರೆ ಎಂದು ತಿಳಿಸಿದರು.