ಕಾಸರಗೋಡು: ತಲಪಾಡಿ – ಮಂಜೇಶ್ವರ – ಕಾಸರಗೋಡು ರಾಷ್ಟ್ರೀಯ ಹೆದ್ದಾರಿಯಲ್ಲಿ ಕುಂಜತ್ತೂರು ಬಳಿ ಮಂಗಳವಾರ ಆಂಬುಲೆನ್ಸ್-ಕಾರು ಡಿಕ್ಕಿಯಾಗಿ ಮೂವರು ಮೃತಪಟ್ಟಿದ್ದಾರೆ.
ಗುರುವಾಯೂರು ನಿವಾಸಿಗಳಾದ ಶರತ್ ಮೆನನ್ (23), ಶ್ರೀನಾಥ್ ಸಹಿತ ಮೂವರು ಮೃತಪಟ್ಟವರೆಂದು ಮಂಜೇಶ್ವರ ಪೊಲೀಸರು ತಿಳಿಸಿದರು.
ಬೆಂಗಳೂರಿನಿಂದ ತ್ರಿಶೂರಿಗೆ ತೆರಳುತ್ತಿದ್ದ ಕಾರು ಮತ್ತು ಎದುರುಬದಿಯಿಂದ ಬರುತ್ತಿದ್ದ ಆಂಬುಲೆನ್ಸ್‌ಗೆ ಡಿಕ್ಕಿ ಹೊಡೆದಿದೆ. ಆಂಬುಲೆನ್ಸ್ ನಲ್ಲಿ ನಗರದ ಆಸ್ಪತ್ರೆಯೊಂದರಿಂದ ರೋಗಿಗಳನ್ನು ಮಂಗಳೂರಿಗೆ ಕರೆದೊಯ್ಯಲಾಗುತ್ತಿತ್ತು. ಆಂಬುಲೆನ್ಸ್‌ನಲ್ಲಿದ್ದ ಮೂವರು ಗಾಯಗೊಂಡಿದ್ದಾರೆ. ಅಪಘಾತದ ತೀವ್ರತೆಗೆ ಕಾರನ್ನು ನೂರು ಮೀಟರ್ ದೂರದ ವರೆಗೂ ಆಂಬುಲೆನ್ಸ್ ಎಳೆದೊಯ್ದಿದೆ. ಎರಡೂ ವಾಹನಗಳು ಪಲ್ಟಿಯಾಗಿ ಹೆದ್ದಾರಿಯಲ್ಲಿ ಬಿದ್ದಿದ್ದವು. ಕಾರು ಸಂಪೂರ್ಣ ನಜ್ಜುಗುಜ್ಜಾಗಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.