ಘಟಪ್ರಭಾ: ಬಾರ್, ಅಂಗಡಿ ಮುಂಗಟ್ಟುಗಳ ಬೀಗ
ಮುರಿದು ಹಣ ದೋಚುತ್ತಿದ್ದ ಮೂವರು ಕಳ್ಳರನ್ನು ಶನಿವಾರ ಘಟಪ್ರಭಾ ಪೊಲೀಸರು ಬಂಧಿಸಿ ದ್ವಿಚಕ್ರವಾಹನ ಹಾಗೂ ಹಣ ವಶಪಡಿಸಿಕೊಂಡಿದ್ದಾರೆ. ಘಟಪ್ರಭಾ, ಹುಕ್ಕೇರಿ, ಸಂಕೇಶ್ವರ, ರಾಯಭಾಗ ಠಾಣೆ ವ್ಯಾಪ್ತಿಯಲ್ಲಿ ವಿವಿಧ ಅಂಗಡಿಗಳಲ್ಲಿ ಕಳ್ಳತನ ಪ್ರಕರಣ ದಾಖಲಾಗಿದ್ದವು. ಪಿಐ ಎಚ್ ಡಿ. ಮುಲ್ಲಾ, ಪಿಎಸ್ ಐಗಳಾದ ಎಚ್.ಕೆ.ನರಳೆ, ಎಸ್.ಆರ್. ಕಣವಿ ಹಾಗೂ ಸಿಬ್ಬಂದಿ ಆರ್. ಆರ್. ಗಿಡ್ಡಪ್ಪಗೋಳ, ಕೆ.ಆರ್. ಬಬಲೇಶ್ವರ. ಕೆ.ಹೋಳರ, ಬಿ.ಎಂ. ತಳವಾರ, ಆರ್. ಕೆ. ಧುಮಾಳೆ, ಬಿ.ಎಸ್. ನಾಯಕ, ಎಲ್.ಎಂ. ಪೂಜೇರಿ, ಎಲ್.ಎಲ್. ಚಿಕ್ಕೋಡಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.