ಗಂಗಾವತಿ: ಗಂಗಾವತಿ ಹೊರವಲಯದಲ್ಲಿ ರೈಲು ಹರಿದು ಮೂವರು ಯುವಕರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ನಿನ್ನೆ ರಾತ್ರಿ ಸಾರಾಯಿ ಕುಡಿದು ಮತ್ತೆರಿದ್ದ ಯುವಕರು ರೈಲ್ವೆ ಟ್ರ್ಯಾಕ್ ಮೇಲೆ ಮಲಗಿದ್ದರು. ಕುಡಿದ ಮತ್ತಿನಲ್ಲಿ ನಿದ್ದೆಗೆ ಜಾರಿದ್ದರು. ಆಗ ಅದೇ ಟ್ರ್ಯಾಕ್ ನಲ್ಲಿ ಬಂದ ರೈಲು ಈ ಮೂವರ ಮೇಲೆ ಹರಿದು ಹೋಗಿದೆ. ಮೃತರನ್ನು ಗಂಗಾವತಿಯ ಮೌನೇಶ್ (23), ಸುನಿಲ್ ಕುಮಾರ್( 23), ವೆಂಕಟ(20) ಎಂದು ಗುರುತಿಸಲಾಗಿದೆ. ಶುಕ್ರವಾರ ರಾತ್ರಿ 9:00 ಸುಮಾರಿಗೆ ರಸ್ತೆಯ ರೈಲ್ವೆ ಹಳಿ ಮೇಲೆ ಇವರು ಮದ್ಯ ಸೇವನೆ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಈ ಸಂದರ್ಭದಲ್ಲಿ ಹುಬ್ಬಳ್ಳಿ ಕಡೆಯಿಂದ ಬಂದ ರೈಲು ಇವರ ಮೇಲೆಯೇ ಹರಿದು ಹೋಗಿದೆ.ಈ ರೈಲು ಹುಬ್ಬಳ್ಳಿಯಿಂದ ಸಿಂಧನೂರಿಗೆ ತೆರಳುತ್ತಿತ್ತು. ರೈಲು ಹರಿದ ರಭಸಕ್ಕೆ ಮ್ರತ ದೇಹಗಳು ಹಳಿಯ ಮೇಲೆ ಚಲ್ಲಾಪಿಲ್ಲಿಯಾಗಿ ಬಿದ್ದಿದ್ದು ಗದಗ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.