ದೆಹಲಿ : ಕರ್ನಾಟಕದ ವಿಧಾನ ಪರಿಷತ್ತಿಗೆ ಶಾಸಕರಿಂದ ಚುನಾಯಿತರಾಗುವ ದ್ವೈವಾರ್ಷಿಕ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಅಭ್ಯರ್ಥಿಗಳಾಗಿ ಈ ಕೆಳಕಂಡ ವ್ಯಕ್ತಿಗಳ ಉಮೇದುವಾರಿಕೆಯ ಪ್ರಸ್ತಾವನೆಯನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅನುಮೋದಿಸಿದ್ದಾರೆ. ಮೇಲ್ಮನೆ ಚುನಾವಣೆಗೆ ಸಂಬಂಧಿಸಿ ಕಾಂಗ್ರೆಸ್ ಪಕ್ಷದಲ್ಲಿ 300ಕ್ಕೂ ಹೆಚ್ಚು ಆಕಾಂಕ್ಷಿಗಳು ಇದ್ದರು. ಕೊನೆಗೂ ತೂಗಿ ಅಳೆದಿರುವ ಪಕ್ಷ ಜಾತಿ, ಸಮುದಾಯಗಳ ಆಧಾರದ ಮೇಲೆ ಟಿಕೆಟ್ ಘೋಷಣೆ ಮಾಡಿದೆ.
ಎನ್.ಎಸ್. ಬೋಸರಾಜು,
ವಸಂತ್ ಕುಮಾರ್,. ಡಾ. ಯತೀಂದ್ರ, ಕೆ. ಗೋವಿಂದರಾಜ್, ಐವನ್ ಡಿಸೋಜಾ, ಶ್ರೀಮತಿ ಬಿಲ್ಕಿಸ್ ಬಾನೋ, ಜಗದೇವ್ ಗುತ್ತೇದಾರ್, ಬಸನಗೌಡ ಬಾದರ್ಲಿ ಅವರಿಗೆ ಕಾಂಗ್ರೆಸ್ ಅವಕಾಶ ಕಲ್ಪಿಸಿಕೊಟ್ಟಿದೆ.