ತಿರುಪತಿ : ತಿರುಪತಿ ಲಡ್ಡು ಮೊದಲಿನಂತೆಯೇ ಸ್ವಾದಿಷ್ಟಭರಿತವಾಗಲಿದೆ ಎಂದು TTD ಸಿಹಿಸುದ್ದಿ ನೀಡಿದೆ.

TTD ನೂತನ ಸಾರಥಿ ಜೆ. ಶ್ಯಾಮಲಾ ರಾವ್ ಅವರು ಗುಣಮಟ್ಟದ ತುಪ್ಪ, ಗುಣಮಟ್ಟದ ಕಡಲೆ ಬೇಳೆ ಮತ್ತು ಗುಣಮಟ್ಟದ ಏಲಕ್ಕಿ ಮತ್ತಿತರ ಗುಣಮಟ್ಟದ ಪರಿಕರಗಳನ್ನು ಬಳಸಿ ಲಡ್ಡುಗಳನ್ನು ರುಚಿಕರವಾಗಿ ತಯಾರಿಸುವಂತೆ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸೂಚಿಸಿದ್ದಾರೆ.

ತಿರುಮಲದ ಗೋಕುಲಂ ವಿಶ್ರಾಂತಿ ಗೃಹದಲ್ಲಿ ಮಂಡಳಿಯ ಉನ್ನತಾಧಿಕಾರಿಗಳಾದ ವೀರಬ್ರಹ್ಮ ಮತ್ತು ಸಿವಿಎಸ್‌ಒ ನರಸಿಂಹ ಕಿಶೋರ್ ಅವರೊಂದಿಗೆ ಪರಿಶೀಲನಾ ಸಭೆ ನಡೆಸಿದ ವೇಳೆ ಈ ಸೂಚನೆ ನೀಡಿದ್ದಾರೆ.