Join The Telegram | Join The WhatsApp |
ಬೆಳ್ತಂಗಡಿ :
ನಾಡಿನ ಪುಣ್ಯ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರಿಗೆ ಶುಕ್ರವಾರ 75ನೇ ಜನ್ಮ ದಿನದ ಸಂಭ್ರಮ. ರತ್ನವರ್ಮ ಹೆಗ್ಗಡೆ ಮತ್ತು ರತ್ನಮ್ಮ ಹೆಗ್ಗಡೆ ದಂಪತಿಗೆ 1948ರ ನ. 25 ರಂದು ಜನಿಸಿದಳು ಹೆಗ್ಗಡೆ ತಮ್ಮ ಇಪ್ಪತ್ತರ ಹರೆಯದಲ್ಲಿ ಕ್ಷೇತ್ರದ 21ನೇ ಧರ್ಮಾಧಿಕಾರಿಗಳಾಗಿ ಆಡಳಿತ ವಹಿಸಿಕೊಂಡರು. 1972ರಲ್ಲಿ ಹೇಮಾವತಿ ಅವರನ್ನು ವಿವಾಹವಾದರು. 54 ವರ್ಷಗಳಲ್ಲಿ ಧರ್ಮ ಸ್ಥಳದ ಧಾರ್ಮಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಮುಖಗಳಲ್ಲಿ ಮಹತ್ತರ ಪರಿವರ್ತನೆಗಳಾಗಿವೆ. ಧರ್ಮಸ್ಥಳದ ಸುವರ್ಣಯುಗ ಪ್ರವರ್ತಕರೆಂದೇ ಪ್ರಸಿದ್ಧರಾದ ಇವರ ಸಾಧನೆಗಳಿಗಾಗಿ ರಾಜ್ಯ ಸರ್ಕಾರ ಕರ್ನಾಟಕ ರತ್ನ ಪ್ರಶಸ್ತಿ ನೀಡಿದ್ದರೆ, ಕೇಂದ್ರ ಸರ್ಕಾರ ಪದ್ಮಭೂಷಣ, ಪದ್ಮ ವಿಭೂಷಣ ಹಾಗೂ ಇತ್ತೀಚೆಗೆ ರಾಜ್ಯ ಸಭಾ ಸದಸ್ಯತ್ವಕ್ಕೆ ನಾಮಕರಣ ಮಾಡಿ ಗೌರವಿಸಿದೆ.
Join The Telegram | Join The WhatsApp |